ರೈಲಿನಲ್ಲಿ ಬಿಲ್‌ ಕೊಡದ ಊಟ ಉಚಿತ !

By Suvarna Web DeskFirst Published Mar 21, 2018, 9:47 AM IST
Highlights

ರೈಲ್ವೆ ಪ್ರಯಾಣದ ವೇಳೆ ಆಹಾರ ತಿಂಡಿತಿನಿಸುಗಳನ್ನು ಖರೀದಿಸಿದರೆ, ದುಬಾರಿ ಮೊತ್ತ ಪಾವತಿಸಬೇಕಾದ ಅನಿವಾರ್ಯತೆಯ ಅನುಭವ ಬಹುತೇಕರಿಗೆ ಆಗಿರುತ್ತದೆ.

ನವದೆಹಲಿ: ರೈಲ್ವೆ ಪ್ರಯಾಣದ ವೇಳೆ ಆಹಾರ ತಿಂಡಿತಿನಿಸುಗಳನ್ನು ಖರೀದಿಸಿದರೆ, ದುಬಾರಿ ಮೊತ್ತ ಪಾವತಿಸಬೇಕಾದ ಅನಿವಾರ್ಯತೆಯ ಅನುಭವ ಬಹುತೇಕರಿಗೆ ಆಗಿರುತ್ತದೆ.

ರೈಲ್ವೆ ಪ್ರಯಾಣಿಕರಿಂದ ಹೆಚ್ಚುವರಿ ಮೊತ್ತ ವಸೂಲಿ ಮಾಡುವ ರೈಲ್ವೆ ಕ್ಯಾಟರರ್‌ಗಳಿಗೆ ನಿಯಂತ್ರಣ ಹೇರುವ ಸಲುವಾಗಿ ಸರ್ಕಾರ ಹೊಸ ನಿರ್ಧಾರಕ್ಕೆ ಬಂದಿದೆ. ರೈಲಿನಲ್ಲಿ ಯಾವುದೇ ಆಹಾರ ಪೂರೈಕೆದಾರನು ಪ್ರಯಾಣಿಕನಿಗೆ ಬಿಲ್‌ ಕೊಡಲಿಲ್ಲವೆಂದಾದಲ್ಲಿ, ಪ್ರಯಾಣಿಕನು ಆ ಆಹಾರಕ್ಕೆ ಹಣ ಕೊಡಬೇಕಾಗಿಲ್ಲ ಎಂಬ ನೀತಿ ಜಾರಿಗೊಳಿಸಲಾಗಿದೆ.

ಅಂದರೆ, ಬಿಲ್‌ ನೀಡಲಿಲ್ಲ ಎಂದಾದಲ್ಲಿ, ಉಚಿತ ಆಹಾರ ನೀತಿಯನ್ನು ಜಾರಿಗೊಳಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ರೈಲ್ವೆ ಕ್ಯಾಟರರ್‌ಗಳು ಹೆಚ್ಚು ಬೆಲೆ ಪಡೆಯುತ್ತಾರೆ ಎಂಬ ದೂರು ಸಾಕಷ್ಟಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ ನಡುವೆ ಹೆಚ್ಚು ದರ ವಿಧಿಸುವ ಕುರಿತಾದ 7,000 ದೂರುಗಳು ದಾಖಲಾಗಿವೆ. ಹೊಸ ನೀತಿ ಬಗ್ಗೆ ಮಾ.31ರೊಳಗೆ ಎಲ್ಲ ರೈಲುಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ.

click me!