
ಮೈಸೂರು (ನ.30): ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ನಿಯಮ ಉಲ್ಲಂಘಿಸಿ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇಶ್ವರಸ್ವಾಮಿ ದೇವಸ್ಥಾನ ಸಮಿತಿಗೆ ನೋಟಿಸ್ ನೀಡಲಾಗಿದೆ.
ಈ ಸಮಿತಿ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಬ್ಯಾರಿಕೆಡ್ ಕಿತ್ತು ಶಾಸಕ ಚಿಕ್ಕಮಾದುಗೆ ಯಾವುದೇ ನೋಟೀಸ್ ನೀಡದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಲಾಢ್ಯರನ್ನು ಬಿಟ್ಟು ಸಣ್ಣಪುಟ್ಟವರ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂಬ ಅನುಮಾನ ಕಾಡತೊಡಗಿದೆ.
ನವೆಂಬರ್ 27 ರಿಂದ 30ರವರೆಗೆ ಬಂಡಿಪುರದ ಕಾಡಿನಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ನಡೆಯುತ್ತದೆ. ಈ ವೇಳೆ ಜಾತ್ರೆಗಾಗಿ ಬರುವ ಜನರು ಕಾಡಿನಲ್ಲೇ ಅಡುಗೆ ಮಾಡಿ ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ಕಾರಣಕ್ಕೆ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಭಕ್ತರಿಗೇನೂ ತೊಂದರೆಯಾಗಿರಲಿಲ್ಲ.
ಈ ನಡುವೆ ನವೆಂಬರ್ 27ರ ರಾತ್ರಿ ಶಾಸಕ ಚಿಕ್ಕಮಾದು, ಸುಮಾರು 300ಕ್ಕೂ ಹೆಚ್ಚು ಬೆಂಬಲಿಗರನ್ನು ಕರೆತಂದು ಬ್ಯಾರಿಕೆಡ್’ಗಳನ್ನು ಕಿತ್ತೊಗೆದು ತಮ್ಮ ಖಾಸಗೀ ಕಾರಿನಲ್ಲೇ ಅರಣ್ಯ ಪ್ರವೇಶ ಮಾಡಿದ್ದಾರೆ. ಶಾಸಕರಾಗಿದ್ದು ಸರ್ಕಾರದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಈ ವೇಳೆ ಚಿಕ್ಕಮಾದು ಅಧಿಕಾರಿಗಳ ಜತೆ ವಾಗ್ವಾದವನ್ನು ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.