ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಕರ್ನಾಟಕ ನಂ.8!

By Web DeskFirst Published Jun 26, 2019, 11:16 AM IST
Highlights

ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಕರ್ನಾಟಕ ನಂ.8| ಕೇರಳ ಪ್ರಥಮ | ಮಕ್ಕಳ ಸಾವಿನ ಖ್ಯಾತಿಯ ಬಿಹಾರ ಲಾಸ್ಟ್

ನವದೆಹಲಿ[ಜೂ.26]: ಕೇಂದ್ರ ಸರ್ಕಾರದ ನೀತಿ ನಿರೂಪಣಾ ಸಂಸ್ಥೆಯಾಗಿರುವ ನೀತಿ ಆಯೋಗ ತನ್ನ ಎರಡನೇ ಆರೋಗ್ಯ ಸೂಚ್ಯಂಕ ಬಿಡುಗಡೆ ಮಾಡಿದ್ದು, ‘ಹೆಲ್ತ್ ಟೂರಿಸಂ’ಗೆ ಖ್ಯಾತವಾಗಿರುವ ಕರ್ನಾಟಕ 8ನೇ ರ‌್ಯಾಂಕ್ ಗಳಿಸಿದೆ. ಆದರೆ ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ. 160ಕ್ಕೂ ಹೆಚ್ಚು ಮಕ್ಕಳ ಸಾವಿನಿಂದ ಕುಖ್ಯಾತಿಗೀಡಾಗಿರುವ ಬಿಹಾರ ಕೊನೆಯ ಸ್ಥಾನದಲ್ಲಿದೆ.

2015-16ರನ್ನು ಮೂಲವರ್ಷವಾಗಿಟ್ಟುಕೊಂಡು, 2017-18 ಅನ್ನು ಉಲ್ಲೇಖ ವರ್ಷವಾಗಿಟ್ಟುಕೊಂಡು ಈ ಸೂಚ್ಯಂಕವನ್ನು ತಯಾರಿಸಲಾಗಿದೆ. ‘ಆರೋಗ್ಯವಂತ ರಾಜ್ಯಗಳು, ಪ್ರಗತಿಶೀಲ ಭಾರತ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರ‌್ಯಾಂಕ್ ವರದಿ’ ಎಂಬ ಪಟ್ಟಿ ಇದಾಗಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿತ್ತು. ಈ ಬಾರಿ ಒಂದು ಸ್ಥಾನ ಮೇಲೆ ಜಿಗಿದಿದೆ.

ಗುಜರಾತ್ 4, ಪಂಜಾಬ್ 5 ಹಾಗೂ ಹಿಮಾಚಲಪ್ರದೇಶ 6ನೇ ಸ್ಥಾನದಲ್ಲಿವೆ. ಕೊನೆಯ ಸ್ಥಾನದಲ್ಲಿ ಉತ್ತರಪ್ರದೇಶ ಇದ್ದರೆ, ಅದಕ್ಕಿಂತ ಒಂದು ಸ್ಥಾನ ಮೇಲೆ ಬಿಹಾರ ಇದೆ. ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಮಿಜೋರಂ ಪ್ರಥಮ ಸ್ಥಾನ ಗಳಿಸಿದ್ದರೆ, ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಮೊದಲ ಸ್ಥಾನದಲ್ಲಿದೆ

click me!