ಆರೋಪಿಗಳು: ಮೌಲಾನಾ ಮಸೂದ್ ಅಝರ್, ಉಗ್ರ ಸಂಘಟನೆ ಜೈಶೆ ಮೊಹಮದ್ ಮುಖ್ಯಸ್ಥ; ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಜೈಶೆ ಮೊಹಮದ್ ಉಪ-ಮುಖ್ಯಸ್ಥ ಹಾಗೂ ಮಸೂದ್ ಅಝರ್ ಸಹೋದರ; ಶಾಹಿದ ಲತೀಫ್, ಜೈಶೆ ಮೊಹಮದ್ ಕಮಾಂಡರ್; ಕಾಶಿಫ್ ಜಾನ್, ಪಠಾಣ್’ಕೋಟ್ ದಾಳಿಯ ರೂವಾರಿ
ನವದೆಹಲಿ (ಡಿ.19): ಪಠಾಣ್’ಕೋಟ್ ವಾಯುನೆಲೆ ಮೇಲೆ ದಾಳಿ ಪ್ರಕರಣದಲ್ಲಿ ಜೈಶೆ ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಸೆರಿದಂತೆ ಇತರ ಕಮಾಂಡರ್’ಗಳ ವಿರುದ್ಧ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಏ) ಇಂದು ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ವಿಶೇಷ ಎನ್’ಐಏ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ರೋಪ ಪಟ್ಟಿಯಲ್ಲಿ, ಮಸೂದ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಏಪಿಏ)ನ್ವಯ ದೋಷಾರೋಪ ಮಾಡಲಾಗಿದೆ. ಅದಕ್ಕೆ ಕೇಂದ್ರ ಗೃಹ ಖಾತೆಯಿಂದ ಅನುಮತಿಯನ್ನು ಪಡೆಯಲಾಗಿದೆ.
ಆರೋಪಿಗಳು:
ಮೌಲಾನಾ ಮಸೂದ್ ಅಝರ್, ಉಗ್ರ ಸಂಘಟನೆ ಜೈಶೆ ಮೊಹಮದ್ ಮುಖ್ಯಸ್ಥ
ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಜೈಶೆ ಮೊಹಮದ್ ಉಪ-ಮುಖ್ಯಸ್ಥ ಹಾಗೂ ಮಸೂದ್ ಅಝರ್ ಸಹೋದರ
ಶಾಹಿದ ಲತೀಫ್, ಜೈಶೆ ಮೊಹಮದ್ ಕಮಾಂಡರ್
ಕಾಶಿಫ್ ಜಾನ್, ಪಠಾಣ್’ಕೋಟ್ ದಾಳಿಯ ರೂವಾರಿ
ಕಳೆದ ಜನವರಿ 2, 2016ರಂದು ಪಠಾಣ್’ಕೋಟ್ ವಾಯುನೆಲೆಯೊಳಗೆ ನುಸುಳಿ ದಾಳಿ ನಡೆಸಿದ್ದರು. ದಾಳಿಯಲ್ಲಿ 7 ಮಂದಿ ಹುತಾತ್ಮರಾಗಿದ್ದು 37 ಮಂದಿ ಗಾಯಗೊಂಡಿದ್ದರು.