ಮೋದಿ ಸರ್ಕಾರಕ್ಕೆ ಎದುರಾಗಿದೆ ಅಗ್ನಿಪರೀಕ್ಷೆ

Published : Jul 19, 2018, 08:01 AM IST
ಮೋದಿ ಸರ್ಕಾರಕ್ಕೆ ಎದುರಾಗಿದೆ ಅಗ್ನಿಪರೀಕ್ಷೆ

ಸಾರಾಂಶ

ಇನ್ನು ಕೇವಲ10 ತಿಂಗಳು ಅಧಿಕಾರಾವಧಿ ಹೊಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದೀಗ ಅಗ್ನಿ ಪರೀಕ್ಷೆಯೊಂದು ಎದುರಾಗಿದೆ. 

ನವದೆಹಲಿ: ಇನ್ನು ಕೇವಲ10 ತಿಂಗಳು ಅಧಿಕಾರಾವಧಿ ಹೊಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೆಲುಗುದೇಶಂ ಹಾಗೂ ಇನ್ನಿತರೆ ವಿರೋಧ ಪಕ್ಷಗಳು ಬುಧವಾರ ಹೊಸದಾಗಿ ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದು, ಅಂಗೀಕಾರವಾಗಿದೆ. ಜು.20 ರ  ಶುಕ್ರವಾರ ದಿನವಿಡೀ ಈ ಬಗ್ಗೆ ಚರ್ಚೆ ನಡೆದು, ಕೊನೆಗೆ ಮತದಾನವಾಗಲಿದೆ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪ್ರಕಟಿಸಿದ್ದಾರೆ. ಆಡಳಿತಾರೂಢ ಪಕ್ಷದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿ ಮಂಡನೆಯಾಗುತ್ತಿರುವುದು 18 ವರ್ಷಗಳಲ್ಲೇ ಮೊದಲು.

2003 ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿ, ಸೋಲನುಭವಿಸಿತ್ತು. 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. ಹಾಲಿ ಬಿಜೆಪಿಯೊಂದರ ಬಳಿಯೇ 273 ಸದಸ್ಯರು ಇರುವುದರಿಂದ ಈ ಬಾರಿಯೂ ವಿರೋಧ ಪಕ್ಷಗಳಿಗೆ ಯಶಸ್ಸು ಸಿಗುವುದು ಕಷ್ಟವಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಬೇಲಿ ಮೇಲೆ ಕುಳಿತಿರುವ ಪಕ್ಷಗಳು ಒಂದು  ನಿರ್ಧಾರಕ್ಕೆ ಬರುವಂತೆ ಮಾಡುವ ತಂತ್ರಗಾರಿಕೆ ಯಿಂದ ಹಾಗೂ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುವ ಸಲುವಾಗಿ ವಿರೋಧಪಕ್ಷಗಳ ಪಾಳೆಯ ಅವಿಶ್ವಾಸ ನಿರ್ಣಯ ಮಂಡನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತೆಲುಗುದೇಶಂಗೆ ಅವಕಾಶ: ಬುಧವಾರದಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಶೂನ್ಯ ವೇಳೆಯಲ್ಲಿ ತೆಲುಗುದೇಶಂ, ಕಾಂಗ್ರೆಸ್, ಎನ್‌ಸಿಪಿ ಹಾಗೂ ಇನ್ನಿತರೆ ಸದಸ್ಯರು ಅವಿಶ್ವಾಸ ನಿರ್ಣಯ ನೋಟಿಸ್ ನೀಡಿದರು. ಇಂತಹ ನೋಟಿಸ್‌ಗೆ ಕನಿಷ್ಠ 50 ಸದಸ್ಯರ ಬೆಂಬಲವಿರಬೇಕು. ಮೊದಲು ಮಂಡನೆ ಮಾಡಿದ ಕಾರಣಕ್ಕೆ ತೆಲುಗುದೇಶಂ ಸದಸ್ಯ ಕೆಸಿನೇನಿ ಶ್ರೀನಿವಾಸ್ ಅವರಿಗೆ ನಿರ್ಣಯ ಮಂಡಿಸಲು ಸ್ಪೀಕರ್ ಮಹಾಜನ್ ಅವಕಾಶ ಮಾಡಿಕೊಟ್ಟಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!