ಫೋನ್‌ಪೇಯಿಂದ ಹೊಸ ಪಿಓಎಸ್, ಆ್ಯಪ್ ಪರಿಚಯ

By Suvarna Web DeskFirst Published Nov 3, 2017, 2:40 PM IST
Highlights

ವರ್ತಕರು ಮತ್ತು ಗ್ರಾಹಕರ ನಡುವೆ ಕ್ಯಾಶ್‌ಲೆಸ್ ವ್ಯವಹಾರ ಮತ್ತುಷ್ಟು ಸುಲಭಗೊಳಿಸುವ ಸಲುವಾಗಿ ಫೋನ್ ಪೇ ಸಂಸ್ಥೆಯು ಹೊಸ ವಿದ್ಯುನ್ಮಾನ ಉಪಕರಣ ಪಾಯಿಂಟ್ ಆಫ್ ಸೇಲ್(ಪಿಒಎಸ್) ಮತ್ತು ಆ್ಯಂಡ್ರಾಯಿಡ್ ಮೊಬೈಲ್ ಆ್ಯಪ್ ಪರಿಚಯಿಸಿದೆ.

ಬೆಂಗಳೂರು: ವರ್ತಕರು ಮತ್ತು ಗ್ರಾಹಕರ ನಡುವೆ ಕ್ಯಾಶ್‌ಲೆಸ್ ವ್ಯವಹಾರ ಮತ್ತುಷ್ಟು ಸುಲಭಗೊಳಿಸುವ ಸಲುವಾಗಿ ಫೋನ್ ಪೇ ಸಂಸ್ಥೆಯು ಹೊಸ ವಿದ್ಯುನ್ಮಾನ ಉಪಕರಣ ಪಾಯಿಂಟ್ ಆಫ್ ಸೇಲ್(ಪಿಒಎಸ್) ಮತ್ತು ಆ್ಯಂಡ್ರಾಯಿಡ್ ಮೊಬೈಲ್ ಆ್ಯಪ್ ಪರಿಚಯಿಸಿದೆ.

ಕಿರಾಣಿ ಅಂಗಡಿಯಿಂದ ಪೆಟ್ರೋಲ್ ಪಂಪ್, ಬಸ್ ನಿರ್ವಾಹಕರೂ ಸೇರಿದಂತೆ ಎಲ್ಲಾ ರೀತಿಯ ವರ್ತಕರು ಇದನ್ನು ಬಳಕೆ ಮಾಡಬಹುದಾಗಿದೆ. ಗ್ರಾಹಕರು ಪೇ ಫೋನ್ ಆ್ಯಪ್‌ನ್ನು ತನ್ನ ಮೊಬೈಲ್‌ನಲ್ಲಿ ಅಳವಡಿಕೆ ಮಾಡಿಕೊಂಡಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲದೆ ಬ್ಲೂಟೂತ್ ಮೂಲಕ ಹಣ ಸಂದಾಯಕ್ಕೆ ಅವಕಾಶವಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಈ ಉಪಕರಣ ಲೋಕಾರ್ಪಣೆ ಮಾಡಿ ಮಾತನಾಡಿದ ಫೋನ್ ಪೇ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್ ನಿಗಮ್, ಈ ಪಿಒಎಸ್ ಬಳಕೆಗೆ ಅತ್ಯಂತ ಸುಲಭವೂ ಹಾಗೂ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ,ಗ್ರಾಮೀಣ ಭಾಗದ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಇದು ನೆರವಾಗಲಿದೆ ಎಂದರು.

ಡಿಜಿಟಲ್ ವ್ಯವಹಾರ ಕ್ಷೇತ್ರಕ್ಕೆ ನೆರವಾಗುವಂತಹ ಉಪಕರಣವನ್ನು ಇದೇ ಮೊದಲಬಾರಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ನೋಡಲು ಕ್ಯಾಲ್ಕ್ಯುಲೇಟರ್ ಮಾದರಿ ಕಂಡರೂ ಬ್ಲೂಟೂಥ್ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಹತ್ತಿರದ ಕ್ಷೇತ್ರ ಸಂವಹ (ಎನ್‌ಎಫ್‌ಸಿ) ಮಾದರಿಯಲ್ಲಿ ಸೇವೆ ಒದಗಿಸಲಿದೆ ಎಂದು ವಿವರಿಸಿದರು.

 

click me!