
ಹೂಸ್ಟನ್(ಫೆ. 06): ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದಲ್ಲಿ ಮತ್ತೆ ವರ್ಣಭೇದದ ಅಸಹ್ಯ ಮುಖ ತಲೆ ಎತ್ತುತ್ತಿದೆ ಎಂಬ ವದಂತಿಗೆ ಪುಷ್ಟಿ ನೀಡುವಂಥ ಸುದ್ದಿ ಕೇಳಿಬರುತ್ತಿದೆ. ಮುಸ್ಲಿಮರು, ಭಾರತೀಯರು ಮತ್ತು ಯಹೂದಿಗಳನ್ನು ಅಮೆರಿಕದಿಂದ ಹೊರಕಳುಹಿಸಬೇಕು ಎಂಬಂತಹ ಸಂದೇಶವಿರುವ ಪೋಸ್ಟರ್'ಗಳು ಜನರಿಗೆ ಶಾಕ್ ಕೊಟ್ಟಿವೆ. ದಕ್ಷಿಣ ಏಷ್ಯಾ ಮೂಲದ ಜನರು ಹೆಚ್ಚಾಗಿರುವ ಹೂಸ್ಟನ್'ನ ಫೋರ್ಟ್ ಬೆಂಡ್ ಎಂಬ ನಗರದಲ್ಲಿ ಇಂಥ ಪೋಸ್ಟರ್'ಗಳು ಹೆಚ್ಚೆಚ್ಚು ರಾರಾಜಿಸುತ್ತಿವೆ.
ಪೋಸ್ಟರ್'ನಲ್ಲಿ ಏನಿದೆ?
"ನಮ್ಮ ಹೊಸ ಅಧ್ಯಕ್ಷ ಡೊನಾಲ್ಡ್ ಜೆ.ಟ್ರಂಪ್ ಅವರು ಬಿಳಿ ರಾಷ್ಟ್ರಕ್ಕೆ ದೇವರು ನೀಡಿದ ಗಿಫ್ಟ್ ಆಗಿದ್ದಾರೆ. ಮುಸ್ಲಿಮರು, ಭಾರತೀಯರು ಮತ್ತು ಯಹೂದಿಗಳೇ, ನೀವು ಟೆಕ್ಸಾಸ್ ನಗರದಿಂದ ತೊಲಗಿ ನಿಮ್ಮ ನಾಡುಗಳಿಗೆ ಹೊರಟುಹೋಗಿ.." ಎಂದು ಪೋಸ್ಟರ್'ನಲ್ಲಿ ಬರೆಯಲಾಗಿದೆ.
ಇದನ್ನು ಕಂಡ ನಿವಾಸಿಗಳು ಪೊಲೀಸರಿಗೆ ದೂರು ನೀಡಲೂ ಹೆದರಿ ಸುಮ್ಮನಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್'ಗಳು ವ್ಯಾಪಕವಾಗಿ ಶೇರ್ ಆಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.