ನ್ಯಾಷನಲ್​ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್‌ಗೆ ಭಾರಿ ಹಿನ್ನಡೆ

By Web Desk  |  First Published Dec 21, 2018, 7:42 PM IST

ನ್ಯಾಷನಲ್​ ಹೆರಾಲ್ಡ್  ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಜಯ ಸಿಕ್ಕಿದ್ದು, ಕಾಂಗ್ರೆಸ್​​ಗೆ ಭಾರಿ ಹಿನ್ನಡೆ​ಯಾಗಿದೆ. ಏನದು ಪ್ರಕರಣ?


ನವದೆಹಲಿ, [ಡಿ. 21]: ನ್ಯಾಷನಲ್​ ಹೆರಾಲ್ಡ್ ಹಣ ದುರುಪಯೋಗ ಪ್ರಕರಣದಲ್ಲಿ ಕಾಂಗ್ರೆಸ್​​ಗೆ ಭಾರಿ ಹಿನ್ನಡೆ​ಯಾಗಿದೆ. ‘ಹೆರಾಲ್ಡ್ ಹೌಸ್​​’ ಅನ್ನು ತಕ್ಷಣ 2 ವಾರದಲ್ಲಿ ಖಾಲಿ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

56 ವರ್ಷ ಅವಧಿಯ ಭೋಗ್ಯದ ಕರಾರು ಬಗ್ಗೆ ತಕರಾರು ತೆಗೆದು ಕೇಂದ್ರ ಸರ್ಕಾರವು ನ್ಯಾಷನಲ್​ ಹೆರಾಲ್ಡ್ ಮಾಲೀಕ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್​ ಲಿಮಿಟೆಡ್​ (AJL)​ಗೆ ‘ಹೆರಾಲ್ಡ್ ಹೌಸ್​​’ ತೆರವು ಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರ್ಟ್​ ಮೊರೆ ಹೋಗಿತ್ತು. 

Tap to resize

Latest Videos

ನ್ಯಾಷನಲ್‌ ಹೆರಾಲ್ಡ್‌ಗೆ ಸೇರಿದ ನಿವೇಶನ ಜಪ್ತಿ

ಇದನ್ನು ಪುರಸ್ಕರಿಸಿರುವ ಕೋರ್ಟ್​, ಇಂದು [ಶುಕ್ರವಾರ] ವಿಚಾರಣೆ ನಡೆಸಿದ್ದು,  2 ವಾರದಲ್ಲಿ ‘ಹೆರಾಲ್ಡ್ ಹೌಸ್​​’ ಭವನವನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರರು ಪಕ್ಷದ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ನ್ಯಾಷನಲ್​ ಹೆರಾಲ್ಡ್ ಸಂಸ್ಥೆಯಲ್ಲಿ ಅರ್ವ್ಯವಹಾರ ನಡೆಸಿದ್ದಾರೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಸುಬ್ರಮಣ್ಯಸ್ವಾಮಿ ದೂರು ದಾಖಲಿಸಿದ್ದರು. 

click me!