
ಬೆಂಗಳೂರು(ಮೇ. 26): ಭವಿಷ್ಯದ ಅಂತರೀಕ್ಷ ಯೋಜನೆಗಳಿಗೆ ಸಜ್ಜಾಗಿರುವ ನಾಸಾ, ಈ ನಿಟ್ಟಿನಲ್ಲಿ 2019 ರಲ್ಲಿ ಎಕ್ಸ್ಪಿಡಿಶನ್ 59/60 ಮತ್ತು ಎಕ್ಸ್ಪಿಡಿಶನ್ 60/61 ಸರಣಿಯ ಗಗನನೌಕೆಯನ್ನು ಅಂತರೀಕ್ಷಕ್ಕೆ ಕಳುಹಿಸಲಿದೆ. ಹೊಸ ಗಗನಯಾತ್ರಿಗಳಿಗೆ ಭರ್ಜರಿ ತರಬೇತಿ ಕೊಡುತ್ತಿರುವ ನಾಸಾ, ಭವಿಷ್ಯದ ಬಾಹಾಕ್ಯಾಶ ಯೋಜನೆಗಳಿಗೆ ಸಿದ್ದತೆ ಮಾಡಿಕೊಂಡಿದೆ.
ಈ ಎರಡೂ ಯಾನಗಳಿಗೆ ನೂತನ ಗಗನಯಾತ್ರಿಗಳನ್ನು ನೇಮಿಸಿರುವ ನಾಸಾ, ಎರಡೂ ಯೋಜನೆಗಳು ಫಲಪ್ರದವಾಗುವ ನಿರೀಕ್ಷೆಯಲ್ಲಿದೆ. ಎಕ್ಸ್ಪಿಡಿಶನ್ 59/60 ಗೆ ಕ್ರಿಶ್ಚಿನಾ ಹ್ಯಾಮ್ಮಾಕ್ ಕೊಚ್ ಮತ್ತು ಎಕ್ಸ್ಪಿಡಿಶನ್ 60/61ಕ್ಕೆ ಆ್ಯಂಡ್ರೂ ಮಾರ್ಗನ್ ಅವರನ್ನು ನೇಮಿಸಲಾಗಿದೆ. ಎಕ್ಸ್ಪಿಡಿಶನ್ 59/60 ಏಪ್ರಿಲ್ 2019 ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದರೆ, ಎಕ್ಸ್ಪಿಡಿಶನ್ 60/61 ಜುಲೈ 2019 ರಲ್ಲಿ ತನ್ನ ಯಾತ್ರೆ ಆರಂಭಿಸಲಿದೆ.
ಈ ಇಬ್ಬರೂ 2013 ರಲ್ಲಿ ನಾಸಾದ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದರು. ಸದ್ಯ ಐಎಸ್ ಎಸ್ ನಲ್ಲಿರುವ ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಿದ್ದು, ಕೊಚ್ ಮತ್ತು ಮಾರ್ಗನ್ ನೇತೃತ್ವದ ಗಗನಯಾತ್ರಿಗಳ ತಂಡ ಐಎಸ್ ಎಸ್ ಗೆ ಪ್ರಯಾಣ ಬೆಳೆಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.