
ನವದೆಹಲಿ(ನ.30): ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ₹ ೧,೧೦೦ ಕೋಟಿ ಕೇವಲ ಜಾಹೀರಾತುಗಳಿಗಾಗಿ ಖರ್ಚು ಮಾಡಿದೆ. ಆರ್‌ಟಿಐ ಕಾರ್ಯಕರ್ತ ರಾಮ್‌ವೀರ್ ಸಿಂಗ್ ಎಂಬವರು ಪಡೆದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ‘ಯಾಹೂ.ಕಾಂ’ ವೆಬ್ ವಾಹಿನಿ ವರದಿ ಮಾಡಿದೆ. ೨೦೧೪, ಜೂ. ೧ರಿಂದ ೨೦೧೬, ಆ. ೩೧ರ ವರೆಗೆ ತೆರಿಗೆದಾರರ ಹಣದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಜಾಹಿರಾತಿಗಾಗಿ ಬಳಸಲಾಗಿದೆ. ಪ್ರತಿ ದಿನಕ್ಕೆ ಸರಾಸರಿ ₹ ೧.೪ ಕೋಟಿ ವ್ಯಯಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
ಈ ಮೊತ್ತ ಕೇವಲ ಟಿವಿ, ಇಂಟರ್ನೆಟ್ ಮತ್ತಿತರ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವ್ಯಯಿಸಿದ್ದು. ಮುದ್ರಣ ಮಾಧ್ಯಮ ಜಾಹಿರಾತುಗಳು, ಹೋರ್ಡಿಂಗ್‌ಗಳು, ಪೋಸ್ಟರ್‌ಗಳು, ಬುಕ್‌ಲೆಟ್‌ಗಳು ಮತ್ತು ಕ್ಯಾಲೆಂಡರ್‌ಗಳಿಗೆ ವ್ಯಯಿಸಲಾದ ಮೊತ್ತ ಇದರಲ್ಲಿ ಸೇರಿಲ್ಲ. ಇವುಗಳಿಗೆ ವ್ಯಯಿಸಲಾದ ಮೊತ್ತವನ್ನೂ ಸೇರಿಸಿದರೆ, ಇದು ಇನ್ನೂ ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ದೆಹಲಿಯ ಆಪ್ ಸರ್ಕಾರ ದಿನಕ್ಕೆ ₹ ೧೬ ಲಕ್ಷ ಜಾಹೀರಾತಿಗೆ ವ್ಯಯಿಸುತ್ತದೆ ಎಂಬ ಮಾಹಿತಿ ಇದೇ ರೀತಿ ಆರ್‌ಟಿಐ ಅರ್ಜಿ ಮೂಲಕ ಬಹಿರಂಗಗೊಂಡಿದ್ದಾಗ, ಸಿಎಂ ಅರವಿಂದ ಕೇಜ್ರಿವಾಲ್ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.