'ಇಂತಹ ಆರೋಪಗಳಿಗೆ ಪ್ರತಿಕ್ರಿಯಿಸುವುದು ನನ್ನ ಘನತೆಯನ್ನು ಕುಂದಿಸುತ್ತದೆ'; ಮೂರ್ತಿ ಗರಂ

By Suvarna Web DeskFirst Published Aug 18, 2017, 3:54 PM IST
Highlights

ಇನ್ಫೊಸಿಸ್ ಎಂಡಿ-ಸಿಇಓ ಸ್ಥಾನಕ್ಕೆ ವಿಶಾಲ್ ಸಿಕ್ಕಾ ದಿಢೀರ್  ರಾಜಿನಾಮೆ ನೀಡಿರುವುದಕ್ಕೆ ನಾರಾಯಣ ಮೂರ್ತಿಯೇ ಕಾರಣ ಎನ್ನುವ ಕಂಪನಿಯ ಆರೋಪದ ವಿರುದ್ಧ ಮೂರ್ತಿ ತಿರುಗಿ ಬಿದ್ದಿದ್ದಾರೆ.

ಬೆಂಗಳೂರು (ಆ.18): ಇನ್ಫೊಸಿಸ್ ಎಂಡಿ-ಸಿಇಓ ಸ್ಥಾನಕ್ಕೆ ವಿಶಾಲ್ ಸಿಕ್ಕಾ ದಿಢೀರ್  ರಾಜಿನಾಮೆ ನೀಡಿರುವುದಕ್ಕೆ ನಾರಾಯಣ ಮೂರ್ತಿಯೇ ಕಾರಣ ಎನ್ನುವ ಕಂಪನಿಯ ಆರೋಪದ ವಿರುದ್ಧ ಮೂರ್ತಿ ತಿರುಗಿ ಬಿದ್ದಿದ್ದಾರೆ.

ವಿಶಾಲ್ ಸಿಕ್ಕಾ 2014 ರಲ್ಲಿಯೇ ಮಂಡಳಿಗೆ ರಾಜಿನಾಮೆ ನೀಡಿದ್ದರು. ಆದರೆ ಹಣವನ್ನಾಗಲಿ, ತಮ್ಮ ಮಕ್ಕಳಿಗೆ ನಮ್ಮ ಕಂಪನಿಯಲ್ಲಿ ಹುದ್ದೆಯನ್ನಾಗಲಿ ಕೇಳಲಿಲ್ಲ. ಈಗ ನನ್ನ ಮೇಲೆ ಮಾಡುತ್ತಿರುವ ಆರೋಪ ಆಧಾರ ರಹಿತವಾದದ್ದು. ಇದಕ್ಕೆಲ್ಲಾ ಪ್ರತಿಕ್ರಿಯಿಸುವುದು ನನ್ನ ಘನತೆಯನ್ನು  ಕಡಿಮೆಗೊಳಿಸುತ್ತದೆ. ಇದಕ್ಕೆಲ್ಲಾ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಉತ್ತರಿಸುತ್ತೇನೆ ಎಂದು ಖಾರವಾಗಿ ಹೇಳಿದ್ದಾರೆ.

ಆಡಳಿತ ಮಂಡಳಿ ಬೆಂಬಲ ನೀಡಿದರೂ ನಾರಾಯಣ ಮೂರ್ತಿಯವರ ನಿರಂತರ ಕಿರುಕುಳವೇ ವಿಶಾಲ್ ಸಿಕ್ಕಾ ರಾಜಿನಾಮೆಗೆ ಕಾರಣ ಎಂದು ಕಂಪನಿ ಆರೋಪಿಸಿದೆ.

click me!