ಜ್ಯೋತಿಷ್ಯ ನಂಬಿ ನದಿಗೆ ಹಾರಿದ್ದ ಅರ್ಚಕ ಮೂರು ದಿನಗಳ ಬಳಿಕ ಪ್ರತ್ಯಕ್ಷ!

By Web DeskFirst Published Aug 13, 2019, 10:44 AM IST
Highlights

ಜ್ಯೋತಿಷ್ಯ ನಂಬಿ  ಕೇಳಿ ನದಿಗೆ ಹಾರಿದ| ಮೂರು ದಿನಗಳ ಬಳಿಕ ಸಾವು ಗೆದ್ದು ಬಂದ|ಅಕ್ಷರಶಃ ಸಾವಿನ ಮನೆ ಕದ ತಟ್ಟಿ ಬಂದ ನಂಜನಗೂಡಿನ ಅರ್ಚಕ  ವೆಂಕಟೇಶ್ ಮೂರ್ತಿ

ಮೈಸೂರು[ಆ.13]: ಕಪಿಲಾ ನದಿಯಲ್ಲಿ ಈಜುವ ಸಾಹಸದಿಂದ ಶನಿವಾರ ಇಲ್ಲಿನ ರೈಲ್ವೆ ಸೇತುವೆ ಮೇಲಿನಿಂದ ಬಿದ್ದು ಕಣ್ಮರೆಯಾಗಿದ್ದ ವೆಂಕಟೇಶ್‌ ಪೂಜಾರಿ ಸೋಮವಾರ ಸುಮಾರು ಅರ್ಧ ಕಿ.ಮೀ ದೂರದ ಹೆಜ್ಜಿಗೆ ಸೇತುವೆ ಬಳಿ ಪ್ರತ್ಯಕ್ಷರಾಗಿದ್ದಾರೆ.

ಸ್ನೇಹಿತರೊಂದಿಗೆ ಬೆಟ್ಟಿಂಗ್‌ ಕಟ್ಟಿನದಿಯಲ್ಲಿ ಈಜಲು ನದಿಗೆ ಹಾರಿದೆ, ನದಿಯ ಸೆಳೆತದಿಂದ ಹೆಜ್ಜಿಗೆ ಸೇತುವೆಯ ಪಿಲ್ಲರ್‌ ನಡುವಿನ ಜಾಗದಲ್ಲಿ ತೂರಿಕೊಂಡು ಕುಳಿತಿದ್ದೆ, ಹೆಚ್ಚಿನ ನೀರಿನ ಸೆಳೆತದಿಂದ ಭಾನುವಾರವೂ ಕೂಡ ಹೊರ ಬರಲು ಸಾಧ್ಯವಾಗಲಿಲ್ಲ, ಸೋಮವಾರ ನೀರು ಕಡಿಮೆಯಾದೊಡನೆ ನಾನು ನದಿಯಲ್ಲಿ ಈಜಿ ದಡ ಸೇರಿದೆ, ಆದರೆ ಮಾಧ್ಯಮಗಳು ನನಗೆ ಸಾವು ತರಿಸಿದವು ಎಂದು ಬೇಸರ ವ್ಯಕ್ತಪಡಿಸಿದರು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಈಜುವ ಸಾಹಸದಿಂದ ಸ್ನೇಹಿತರಿಗೆ ವೀಡಿಯೋ ಮಾಡುವಂತೆ ತಿಳಿಸಿ ಶನಿವಾರ ಬೆಳಗ್ಗೆ 9ರ ವೇಳೆಯಲ್ಲಿ ವೆಂಕಟೇಶ್‌ ಪೂಜಾರಿ ರೈಲ್ವೆ ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದರು. ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸ್ನೇಹಿತರೊಂದಿಗೆ ಬೆಟ್ಟು ಕಟ್ಟಿದ್ದ ವೆಂಕಟೇಶ್‌ ಪೂಜಾರಿ ನದಿಗೆ ಹಾರಿದ ಬಳಿಕ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು ಎಂದು ಭಾವಿಸಲಾಗಿತ್ತು.

click me!