
ಬೆಂಗಳೂರು (ಫೆ.22): ಗನ್ ಮಾಫಿಯಾದಲ್ಲಿ ನಲಪಾಡ್ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೆ ಡ್ರಗ್ ಮಾಫಿಯಾದಲ್ಲಿಯೂ ನಲಪಾಡ್ ಹೆಸರು ಕೇಳಿ ಬಂದಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಡ್ರಗ್ ಸರಬರಾಜಲ್ಲಿ ನಲಪಾಡ್ ತೊಡಗಿರುವ ಆರೋಪ ಕೇಳಿ ಬಂದಿದೆ. ನಗರದ ಪ್ರತಿಷ್ಠಿತ ಸ್ಟಾರ್ ಹೋಟೆಲ್, ಪಬ್’ಗಳಗೆ ಡ್ರಗ್ ಸರಬರಾಜು ಮಾಡುತ್ತಿದ್ದರು. ಮಗನ ಡ್ರಗ್ ಮಾಫಿಯಾಗೆ ಬೆಂಬಲವಾಗಿ ನಿಂತಿದ್ದರಾ ಶಾಸಕ ಎನ್.ಎ.ಹ್ಯಾರಿಸ್ ಎನ್ನುವ ಪ್ರಶ್ನೆ ಎದ್ದಿದೆ. ಡ್ರಗ್ ಮಾಫಿಯಾದ ತನಿಖೆ ಮುಂದಾಗಿರುವ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿಸಿ ಶಾಸಕ ಹ್ಯಾರಿಸ್ ತೊಂದರೆ ನೀಡಿದ್ದಾರೆ. ಉನ್ನತ ಮಟ್ಟದ ತನಿಖೆ ಆಗ್ರಹಿಸಿ ದೂರು ನೀಡಲು ಮುಂದಾಗಿದ್ದಾರೆ ವಕೀಲ ನಟರಾಜ್ ಶರ್ಮಾ. ಗೃಹ ಸಚಿವರಿಗೆ, ಸಿಬಿಐನ ಡೈರಕ್ಟರ್ ಆಫ್ ನಾರ್ಕೋಟಿಕ್ ವಿಂಗ್’ಗೆ ಇಂದು ನಟರಾಜ್ ಶರ್ಮ ದೂರು ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.