‘ಬಿಜೆಪಿಗೆ ವಿರೋಧ, ಕೊಳ್ಳೇಗಾಲ ಶಾಸಕನ ಬೆಂಬಲ ಜೆಡಿಎಸ್-ಕಾಂಗ್ರೆಸ್‌ಗೆ’

By Web DeskFirst Published Jul 18, 2019, 4:05 PM IST
Highlights

ಕರ್ನಾಟಕದ ರಾಜಕೀಯ ಪ್ರಹಸನ ಬಹುತೇಕ ಅಂತಿಮ ಘಟ್ಟ ತಲುಪಿದೆ. ಸಿಎಂ ವಿಶ್ವಾಸ ಮತ ಯಾಚಿಸುತ್ತಿದ್ದು, ಅತೃಪ್ತ ಶಾಸಕರು ಮರಳುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ವಿಶ್ವಾಸ ಹೀಗಿದೆ ನೋಡಿ....

ಬೆಂಗಳೂರು [ಜು.18] : ರಾಜ್ಯ ಸರ್ಕಾರಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿರುವ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್-ಜೆಡಿಎಸ್ ಸಜ್ಜಾಗಿದೆ. ಸುಪ್ರೀಂ ಕೋರ್ಟ್ ವರ್ಸಸ್ ಸ್ಪೀಕರ್ ಗಲಾಟೆ ಅಂತಿಮ ಹಂತಕ್ಕೆ ಬಂದಿದ್ದು, ಇದೀಗ ರಾಜ್ಯಪಾಲ ವರ್ಸಸ್ ಸ್ಪೀಕರ್ ಎಂಬಂತೆ ಕಾಣಿಸುತ್ತಿದೆ. ಕರ್ನಾಟಕ ಸದನದಲ್ಲಿ ಈಗಾಗಲೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಿದ್ದು, ಸದನವನ್ನು ಮುಂದೂಡಲು ಆಡಳಿತರೂಢ ಪಕ್ಷಗಳು ಹೆಣಗಾಡುತ್ತಿವೆ. 

 ಒಟ್ಟಿನಲ್ಲಿ ಸದನದಲ್ಲಿ ಆರೋಗ್ಯಕರ ಚರ್ಚೆಗಳು ನಡೆಯುತ್ತಿವೆ, ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪ್ರತಿಪಕ್ಷಗಳು ಆರೋಪಿಸಿರುವಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವಿಳಂಬ ಮಾಡಲಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಎಲ್ಲ ವಿಚಾರಗಳ ಬಗ್ಗೆ ಚರ್ಚಿಸುವುದು, ಸ್ಪಷ್ಟೀಕರಣ ನೀಡಲಾಗುತ್ತಿದೆ, ಎಂದರು. 

ಅಷ್ಟೇ ಅಲ್ಲ 'ಕೊಳ್ಳೇಗಾಲ ಬಿಎಸ್ಪಿ ಶಾಸಕ ಎನ್. ಮಹೇಶ್ ಕಲಾಪಕ್ಕೆ ಗೈರಾಗಿದ್ದು, ಆದರೂ, ಅವರ ಬೆಂಬಲ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕಿದೆ. ಬಹುಮತ ಸಾಬೀತು ವೇಳೆ ಅವರು ಸರಕಾರದ ಪರ ಮತ ಚಲಾಯಿಸುತ್ತಾರೆ; ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಸರಕಾರಕ್ಕೆ ಅಗತ್ಯವಿರೋ ಮ್ಯಾಜಿಕ್ ನಂಬರ್ ಹೇಗೆ ದಾಟುತ್ತದೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ. ದೇಶದ ಚಿತ್ತವೇ ರಾಜ್ಕಯದಲ್ಲಿರುವ ನಡೆಯುತ್ತಿರುವ 'ಕರ್'ನಾಟಕದ ಮೇಲಿರುವುದು ಮಾತ್ರ ಸತ್ಯ.

click me!