ಕೆಲವು ಬಗೆಯ ಹಾವುಗಳನ್ನು ದೇವರೆಂದು ಪೂಜಿಸುವ ಮಂದಿ ಭಾರತೀಯರು. ಸರಿಸೃಪಗಳನ್ನು ಕಾಪಾಡುವ, ಆ ಮೂಲಕ ಪರಿಸರ, ಜೈವ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವವರು ನಾವು. ಇಂಥ ಹಾವಿನ ಬಗ್ಗೆ ಸತ್ಯ, ಮಿಥ್ಯಗಳೇನು?
ಹಾವು ನೋಡಿದರೆ ಸಾಕು, ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರಿದ್ದಾರೆ. ಹಾವು ನೋಡಿ ಭಯಗೊಳ್ಳುವವರೂ ನಮ್ಮಲ್ಲಿ ಹೆಚ್ಚು. ಅಲ್ಲದೇ, ಸುಖಾ ಸುಮ್ಮನೆ ಅದನ್ನು ಹಾನಿ ಮಾಡುವವರೂ ನಮ್ಮಲ್ಲೇನೂ ಕಮ್ಮಿ ಇಲ್ಲ. ಇಂಥ ಹಾವಿನ ಬಗ್ಗೆ ಕೆಲವು ಮಾಹಿತಿಗಳು ನಿಮಗಾಗಿ....