ಜುಲೈ 1ರಿಂದ ಹೆಚ್ಚಲಿದೆ ಮೃಗಾಲಯದ ಪ್ರವೇಶ ಶುಲ್ಕ

By Web DeskFirst Published Jun 25, 2019, 8:47 AM IST
Highlights

ಜುಲೈ 1ರಿಂದ ಹೆಚ್ಚಾಗಲಿಗೆ ಮೃಗಾಲಯದ ಪ್ರವೇಶ ಶುಲ್ಕ |  ನಿರ್ವಹಣೆಯ ವೆಚ್ಚ ಸರಿದೂಗಿಸಲು ಚಾಮರಾಜೇಂದ್ರ ಮೃಗಾಲಯ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ 

ಮೈಸೂರು (ಜೂ. 25): ದಿನದಿಂದ ದಿನಕ್ಕೆ ನಿರ್ವಹಣೆ ಖರ್ಚು ಹೆಚ್ಚಳ, ಪ್ರಾಣಿಗಳ ಆರೈಕೆಗೆ ಒತ್ತು ಕೊಡುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವುದರೊಂದಿಗೆ ನಿರ್ವಹಣೆಯ ವೆಚ್ಚ ಸರಿದೂಗಿಸಲು ಚಾಮರಾಜೇಂದ್ರ ಮೃಗಾಲಯ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದ್ದು, ಜುಲೈ 1ರಿಂದಲೇ ಪ್ರವೇಶ ಶುಲ್ಕ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ.

ಈ ಹಿಂದೆ ವಾರದ ದಿನಗಳಲ್ಲಿ ಜಾರಿಯಲ್ಲಿದ್ದ ವಯಸ್ಕರಿಗೆ .60 ಟಿಕೆಟ್‌ ದರವನ್ನು .80, ವಾರಾಂತ್ಯದ ದಿನಗಳಲ್ಲಿದ್ದ .80 ಅನ್ನು, 100 ರು.ಗೆ ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ ಸಾಮಾನ್ಯ ದಿನಗಳಲ್ಲಿ .40, ವಾರಾಂತ್ಯ ದಿನಗಳಲ್ಲಿ .50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಕಳೆದ ವರ್ಷ .10 ಹೆಚ್ಚಳ ಮಾಡಲಾಗಿತ್ತು.

ಈ ಕುರಿತು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಎಂ. ಕುಲಕರ್ಣಿ ಮಾತನಾಡಿ, ಮೃಗಾಲಯದಲ್ಲಿರುವ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ಪ್ರಾಣಿಗಳ ಮನೆ ನವೀಕರಣ, ಕೆಲವು ಅಭಿವೃದ್ಧಿ ಕಾರ್ಯ ಕೈಗೊಂಡು, ಪ್ರವಾಸಿಗರಿಗೆ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸಂಪನ್ಮೂಲ ಕ್ರೂಢೀಕರಣ ಅಗತ್ಯವಾಗಿದೆ ಎಂದು ಹೇಳಿದರು.

click me!