
ಬೆಂಗಳೂರು (ಮಾ. 15): ಚುನಾವಣಾ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಡಳಿತದಲ್ಲಿ ರಿ ಶಫಲ್ ಮಾಡಲಾಗಿದೆ. ಹಾಸನ ಡಿಸಿಯಾಗಿ ವರ್ಗಾವಣೆ ಹೊಂದಿರುವ ಡಿ.ರಂದೀಪ್ ಸ್ಥಿತಿ ಅತಂತ್ರವಾಗಿದೆ.
ಸರ್ಕಾರದಿಂದ ಎಲ್ಲಿಯೂ ಸ್ಥಳ ನಿಯೋಜನೆ ಮಾಡದ ಹಿನ್ನಲೆಯಲ್ಲಿ ಡಿ. ರಂದೀಪ್ ಮೈಸೂರಿನಲ್ಲಿಯೇ ಉಳಿದಿದ್ದಾರೆ. ರೋಹಿಣಿ ಸಿಂಧೂರಿ ವರ್ಗಾವಣೆಗೆ ತಡೆ ತಂದ ಹಿನ್ನಲೆಯಲ್ಲಿ ಹಾಸನಕ್ಕೆ ವರ್ಗಾವಣೆಯಾಗಿದ್ದ ಡಿ.ರಂದೀಪ್ ಮೈಸೂರಿನಲ್ಲಿಯೇ ಉಳಿಯಬೇಕಾಯಿತು. ಹಾಸನದಲ್ಲಿ ರೋಹಿಣಿ ಮುಂದುವರೆದಿದ್ದಾರೆ. ಮೈಸೂರಿನಲ್ಲಿ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಂದೀಪ್’ಗೆ ಸ್ಥಳ ನಿಯುಕ್ತಿಗೊಳಿಸದ ಪರಿಣಾಮ, ಜಿಲ್ಲಾಧಿಕಾರಿ ನಿವಾಸದಲ್ಲೇ ಉಳಿದಿದ್ದಾರೆ.
ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಅಂತಿಮ ತೀರ್ಪು ಬರುವವರೆಗೂ ಮೈಸೂರಿನಲ್ಲಿ ಮುಂದುವರೆಸುವಂತೆ ರಂದೀಪ್ ಕೇಳಿದ್ದರು. ರಂದೀಪ್ ಮನವಿಗೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.