ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿದೆ ಅರಮನೆ ನಗರಿ

By Suvarna Web DeskFirst Published Sep 15, 2017, 9:51 PM IST
Highlights

ಶರನ್ನವರಾತ್ರಿಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಇಂದಿನಿಂದ ಅಂಬಾವಿಲಾಸ ಅರಮನೆಯಲ್ಲಿ ದಸರಾ ಸಿದ್ಧತೆಗಳು ನಡೆಯುತ್ತಿವೆ.

ಮೈಸೂರು (ಸೆ.15): ಶರನ್ನವರಾತ್ರಿಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಇಂದಿನಿಂದ ಅಂಬಾವಿಲಾಸ ಅರಮನೆಯಲ್ಲಿ ದಸರಾ ಸಿದ್ಧತೆಗಳು ನಡೆಯುತ್ತಿವೆ.

ಸಾಂಪ್ರದಾಯಿಕವಾಗಿ ಶತಮಾನಗಳಿಂದ ರಾಜಮನೆತನದಲ್ಲಿ ನವರಾತ್ರಿ ಉತ್ಸವದಂತೆ ಇತರ ಧಾರ್ಮಿಕ ಕಾರ್ಯಗಳು ನಡೆದುಕೊಂಡು ಬಂದಿದ್ದು, ಈ ವರ್ಷ ನಡೆಲಿರುವ ನವರಾತ್ರಿಯ ಪೂಜಾ ಕೈಂಕರ್ಯಗಳಲ್ಲಿ ರಾಜ ವಂಶಸ್ಥ ಯದುವೀರ್ ಪಾಲ್ಗೊಳ್ಳಲಿದ್ದಾರೆ. ದಸರಾ ಸಿದ್ಧತೆಯ ಮೊದಲ ದಿನವಾದ ಇಂದು ಬೆಳಗ್ಗೆ 7.45 ರಿಂದ 8.45ರವರೆಗೆ ಅರಮನೆಯ ದರ್ಬಾರ್ ಹಾಲ್‌ನಲ್ಲಿ ನವಗ್ರಹ ಹೋಮ, ಶಾಂತಿ ಪೂಜೆ ನವರಾತ್ರಿಯ ಆರಂಭದ ಪೂಜಾ ವಿಧಿ-ವಿಧಾನಗಳು ಆರಂಭವಾದವು. ಅದೇ ರೀತಿ 9.45 ರಿಂದ 10.15ರವರೆಗೆ ಅಂಬಾ ವಿಲಾಸ ದರ್ಬಾರ್ ಹಾಲ್‌ನಲ್ಲಿ ಗೆಜ್ಜಗನಹಳ್ಳಿ ಗ್ರಾಮಸ್ಥರಿಂದ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ಕೂಡ ನಡೆಯಿತು. ಇದರೊಂದಿಗೆ ಅಂಬಾವಿಲಾಸ ಅರಮನೆಯಲ್ಲಿ ಮಹಾರಾಜರ ಸಾಂಪ್ರದಾಯಿಕ ದಸರಾಗೆ ಚಾಲನೆ ಸಿಕ್ಕಂತಾಗಿದೆ.

Latest Videos

click me!