ಮುಸ್ಲಿಮರೆಲ್ಲಾ ಯಾರಿಗೆ ವೋಟ್ ಮಾಡಬೇಕಂತೆ ಗೊತ್ತಾ?

Published : Jun 25, 2018, 02:53 PM ISTUpdated : Jun 25, 2018, 03:10 PM IST
ಮುಸ್ಲಿಮರೆಲ್ಲಾ ಯಾರಿಗೆ ವೋಟ್ ಮಾಡಬೇಕಂತೆ ಗೊತ್ತಾ?

ಸಾರಾಂಶ

ಮುಸ್ಲಿಮರೆಲ್ಲಾ ಯಾರಿಗೆ ಓಟ್ ಮಾಡಬೇಕಂತೆ ಗೊತ್ತಾ? ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದೇನು? ಮುಸ್ಲಿಮರೆಲ್ಲಾ ಸೇರಿ ಮುಸ್ಲಿಂ ಅಭ್ಯರ್ಥಿಯನ್ನೇ ಗೆಲ್ಲಿಸಬೇಕಂತೆ ಹೈದರಾಬಾದ್ ನಲ್ಲಿ ಒವೈಸಿ ವಿವಾದಾತ್ಮಕ ಹೇಳಿಕೆ  

ಹೈದರಾಬಾದ್(ಜೂ.25): ಮುಸ್ಲಿಮರು ಚುನಾವಣೆಗಳಲ್ಲಿ ಕೇವಲ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಜಾತ್ಯಾತೀತತೆ ಉಳಿಯಬೇಕಾದರೆ ದೇಶದ ಮುಸ್ಲಿಮರೆಲ್ಲಾ ಒಂದಾಗಬೇಕು ಮತ್ತು ಚುನಾವಣೆಗಳಲ್ಲಿ ಕೇವಲ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಬೇಕು ಎಂದು ಒವೈಸಿ ಹೇಳಿದ್ದಾರೆ.

ಕಳೆದ 70 ವಷರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಗಳಂತೆ ಬಳಕೆ ಮಾಡಿವೆಯೇ ಹೊರತು ಸಮುದಾಯದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ ಎಂದು ಒವೈಸಿ ಗುಡುಗಿದ್ದಾರೆ. ದೇಶದ ಜಾತ್ಯಾತೀತತೆ, ಅಲ್ಪಸಂಖ್ಯಾತರ ಭದ್ರತೆ, ಸಾಮಾಜಿಕ ಹಕ್ಕುಗಳಿಗಾಗಿ ದೇಶದ ಸಮಸ್ತ ಮುಸ್ಲಿಮರೆಲ್ಲಾ ಒಂದಾಗಿ ಹೋರಾಡುವ ಕಾಲ ಬಂದಿದೆ. ಯಾವುದೇ ಕಾರಣಕ್ಕೂ ಜಾತ್ಯಾತೀತತೆಯ ಸೋಗು ಹಾಕಿರುವ ರಾಜಕೀಯ ಪಕ್ಷಗಳನ್ನು ನಂಬಬೇಡಿ ಎಂದು ಒವೈಸಿ ಕರೆ ನೀಡಿದ್ದಾರೆ.

ಇನ್ನು ಒವೈಸಿ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸಮಾಜವನ್ನು ಒಡೆಯುವ ಕೆಲಸದಲ್ಲಿ ಒವೈಸಿ ನಿಸ್ಸೀಮರು ಎಂದು ಕಾಂಗ್ರೆಸ್ ಕಿಡಿಕಾರಿದೆ. ಇನ್ನು ಮುಸ್ಲಿಮರನ್ನು ಹಿಂದುಗಳ ವಿರುದ್ದ ಎತ್ತಿ ಕಟ್ಟುವ ಒವೈಸಿ ರಾಜಕಾರಣ ದೇಶವನ್ನು ಅಪಾಯದ ಅಂಚಿಗೆ ತಳ್ಳಲಿದೆ ಎಂದು ಬಿಜೆಪಿ ಹರಿಹಾಯ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ