
ಪುತ್ತೂರು: ಸಂಬಂಧಿಕರು ಇದ್ದರೂ ಅವರು ಅಂತ್ಯಸಂಸ್ಕಾರಕ್ಕೆ ಬಾರದ ಕಾರಣ ಸ್ಥಳೀಯ ಮುಸ್ಲಿಂ ಯುವಕರೇ ಹಣ ಸಂಗ್ರಹಿಸಿ ಹಿಂದೂ ಬಡ ಮಹಿಳೆಯೊಬ್ಬರ ಮೃತದೇಹದ ಅಂತ್ಯಸಂಸ್ಕಾರವನ್ನು ನಡೆಸಿದ ಘಟನೆ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಕಾಲೋನಿಯಲ್ಲಿ ನಡೆದಿದೆ.
ಅಲ್ಲಿನ ವಿದ್ಯಾಪುರದ ನಿವಾಸಿಯಾಗಿದ್ದ ದಿ.ನಾರಾಯಣ ಸಿಂಗ್ ಎಂಬವರ ಪುತ್ರಿ ಭವಾನಿ(52) ಮೃತಪಟ್ಟವರು. ಹಲವಾರು ವರ್ಷ ಗಳಿಂದ ತನ್ನ ಚಿಕ್ಕಪ್ಪನ ಪುತ್ರನಾದ ಕೃಷ್ಣಸಿಂಗ್ ವರ ವಿದ್ಯಾಪುರದಲ್ಲಿರುವ ಮನೆಯಲ್ಲಿ ವಾಸ್ತವ್ಯವಿದ್ದ ಭವಾನಿ ಶನಿವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಈ ಬಗ್ಗೆ ಮೃತರ ಸಹೋದರನ ಸಹಿತ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರೂ ಯಾರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆ ಯಲ್ಲಿಯೇ ಮೃತದೇಹ ಬಾಕಿಯಾಗಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಸ್ಲಿಂ ಯುವಕರು, ಆಕೆಯ ಸಂಬಂಧಿ ಕೃಷ್ಣ ಸಿಂಗ್ ಅವರಲ್ಲಿ ವಿಚಾರಿಸಿದಾಗ ಅಂತ್ಯಸಂಸ್ಕಾರ ಮಾಡಲು ತನ್ನಲ್ಡ್ ಹಣವಿಲ್ಲ ಎಂದು ತಿಳಿಸಿದರು.
ಆಗ ಆ ಯುವಕರೆಲ್ಲಾ ಒಟ್ಟಾಗಿ ಹಣ ಸಂಗ್ರಹಿಸಿ ಮೃತರ ಸಹೋದರನ ಜೊತೆ ಸೇರಿಕೊಂಡು ಪುತ್ತೂರಿನ ಮಡಿವಾಳ ಕಟ್ಟೆಯಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ದರು. ಮುಸ್ಲಿಂ ಯುವಕರ ಈ ಮಾನವೀಯ ನಡೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.