ಪ್ರಧಾನಿ ಕಚೇರಿ ವಿರುದ್ಧ ಬಿಜೆಪಿಯ ಜೋಶಿ ದಾಳಿ...!

By Web DeskFirst Published Sep 25, 2018, 9:40 AM IST
Highlights

ಈ ಹಿಂದೆ ಆರ್‌ಬಿಐ ಗವರ‌್ನರ್ ಆಗಿದ್ದ ರಘುರಾಂ ರಾಜನ್, ಬ್ಯಾಂಕ್‌ಗಳಿಗೆ ಭಾರೀ ಪ್ರಮಾಣದ ಸಾಲ ಉಳಿಸಿಕೊಂಡ ಉದ್ಯಮಿಗಳ ಪಟ್ಟಿಯೊಂದನ್ನು ಪ್ರಧಾನಿ ಕಚೇರಿಗೆ ಸಲ್ಲಿಸಿ, ಕ್ರಮಕ್ಕೆ ಶಿಫಾರಸು ಮಾಡಿದ್ದರು.

ನವದೆಹಲಿ[ಸೆ.25]: ಬ್ಯಾಂಕ್‌ಗಳಿಗೆ ನೂರಾರು ಕೋಟಿ ರು. ವಂಚಿಸಿದವರು ವಿದೇಶಗಳಿಗೆ ಪರಾರಿಯಾಗಲು ಎನ್‌ಡಿಎ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂಬ ವಿಪಕ್ಷಗಳ ಆರೋಪದ ನಡುವೆಯೇ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅವರದ್ದೇ ಪಕ್ಷದ ಮುರಳಿ ಮನೋಹರ್ ಜೋಶಿ ಮುಜುಗರ ತರುವಂಥ ನಡೆ ಇಟ್ಟಿದ್ದಾರೆ.

ಈ ಹಿಂದೆ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಂ ರಾಜನ್, ಬ್ಯಾಂಕ್‌ಗಳಿಗೆ ಭಾರೀ ಪ್ರಮಾಣದ ಸಾಲ ಉಳಿಸಿಕೊಂಡ ಉದ್ಯಮಿಗಳ ಪಟ್ಟಿಯೊಂದನ್ನು ಪ್ರಧಾನಿ ಕಚೇರಿಗೆ ಸಲ್ಲಿಸಿ, ಕ್ರಮಕ್ಕೆ ಶಿಫಾರಸು ಮಾಡಿದ್ದರು. ಆ ಪಟ್ಟಿಯಲ್ಲಿ ಯಾರ್ಯಾರ ಹೆಸರಿತ್ತು? ಅಂಥವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಕೋಡಿ ಎಂದು ಇದೀಗ ಜೋಷಿ ಅಧ್ಯಕ್ಷರಾಗಿರುವ ಸಂಸತ್ತಿನ ಅಂದಾಜು ಸಮಿತಿ ಪ್ರಧಾನಿ ಕಚೇರಿಗೆ ಸೂಚಿಸಿದೆ.

ಈ ವರದಿಯಲ್ಲಿ, ಈಗಾಗಲೇ ಪರಾರಿಯಾಗಿರುವ ಮಲ್ಯ, ಚೋಕ್ಸಿ, ನೀರವ್ ಮೋದಿ ಹೆಸರು ಇದ್ದಿದ್ದು ಪತ್ತೆಯಾದರೆ, ಎನ್‌ಡಿಎ ಸರ್ಕಾರಕ್ಕೆ ಮತ್ತೆ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.

click me!