ಮುಂಬೈನಲ್ಲಿ ರೈಲ್ವೆ ನಿಲ್ದಾಣದ ಬಳಿ ಸೇತುವೆ ಕುಸಿತ, ರಕ್ಷಣಾ ಕಾರ್ಯ ಬಿರುಸು

Published : Mar 14, 2019, 08:36 PM ISTUpdated : Mar 14, 2019, 08:48 PM IST
ಮುಂಬೈನಲ್ಲಿ ರೈಲ್ವೆ ನಿಲ್ದಾಣದ ಬಳಿ ಸೇತುವೆ ಕುಸಿತ, ರಕ್ಷಣಾ ಕಾರ್ಯ ಬಿರುಸು

ಸಾರಾಂಶ

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ  ಪಾದಚಾರಿ ಸೇತುವೆ ಕುಸಿದುಬಿದ್ದಿದೆ.  ಇಬ್ಬರು ಸಾವನ್ನಪ್ಪಿದ್ದು 23 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಮುಂಬೈ[ಮಾ.14] ಮುಂಬೈನಲ್ಲಿ ರೈಲ್ವೆ ನಿಲ್ದಾಣದ ಪಾದಚಾರಿ ಸೇತುವೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು  23 ಜನರು ಗಾಯಗೊಂಡಿದ್ದಾರೆ ಎಂದು ಸದ್ಯಕ್ಕೆ ಮಾಹಿತಿ ಲಭ್ಯವಾಗಿದೆ.

ಛತ್ರಪತಿ ಶಿವಾಜಿ ಟೆರ್ಮಿನಸ್ ರೈಲ್ವೆ ನಿಲ್ದಾಣದ ಹೊರಭಾಗದ ಪಾದಚಾರಿ ಸೇತುವೆ ಕುಸಿದಿದೆ. ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. 

ಆಜಾದ್ ಮೈದಾನ್ ಪೊಲೀಸ್ ಠಾಣೆ, ಟೈಮ್ಸ್‌ ಆಫ್ ಇಂಡಿಯಾ ಕಟ್ಟಡವನ್ನು ರೈಲ್ವೆ ನಿಲ್ದಾಣದೊಂದಿಗೆ ಈ ಸೇತುವೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದೆ.

2017ರಲ್ಲಿ ಮುಂಬೈನ ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತ ಸಂಭವಿಸಿ 22 ಜನರು ಸಾವನ್ನಪ್ಪಿದ್ದರು.  ನಿಲ್ದಾಣದಲ್ಲಿರುವ ಮೇಲ್ಸೇತುವೆ (ಫೂಟ್ ಓವರ್ ಬ್ರಿಜ್) ಬಳಿ ಬೆಳಗ್ಗೆ 10:30ಕ್ಕೆ ಸಂಭವಿಸಿದ ಈ ದುರಂತ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಾ ಕ್ರಮ ಅಳವಡಿಸಿಕೊಂಡಿಲ್ಲ ಎಂಬುದನ್ನು ಸಾರಿ ಹೇಳಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್