ಪತ್ರಕರ್ತೆ ಎದುರೆ ಹಸ್ತಮೈಥುನ ಮಾಡಿಕೊಂಡ ಆಟೋ ಚಾಲಕ ಪರಾರಿ

Published : Aug 24, 2018, 03:42 PM ISTUpdated : Sep 09, 2018, 08:43 PM IST
ಪತ್ರಕರ್ತೆ ಎದುರೆ ಹಸ್ತಮೈಥುನ ಮಾಡಿಕೊಂಡ ಆಟೋ ಚಾಲಕ ಪರಾರಿ

ಸಾರಾಂಶ

ಇವರಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಮುಂಬೈನಲ್ಲಿ ಮತ್ತೊಂದು ಹಸ್ತಮೈಥುನದ ಪ್ರಕರಣ ಸದ್ದು ಮಾಡಿದೆ. ಆಟೋ ಚಾಲಕನೊನಬ್ಬ ಮಹಿಳೆಯ ಎದುರೆ ಹಸ್ತ ಮೈಥುನ ಮಾಡಿಕೊಂಡಿದ್ದು ಪರಾರಿಯಾಗಿದ್ದಾನೆ.

ಮುಂಬೈ(ಆ.24) ಮುಂಬೈನ ಬೊರ್ವಿಲಿಯಲ್ಲಿ ಮತ್ತೊಂದು ಹಸ್ತಮೈಥುನ ಪ್ರಕರಣ ನಡೆದಿದ್ದು ಪೊಲೀಸರು ತಲೆ ಕೆರೆದುಕೊಳ್ಳುವಂತಾಗಿದೆ. ಮಹಿಳಾ ಪತ್ರಕರ್ತೆಯೊಬ್ಬರು ತಮಗಾದ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಾತ್ರಿ ಸುಮಾರು 11.30ರ ಸಮಯಕ್ಕೆ ಇನ್ಫಿನಿಟಿ ಮಾಲ್ ಬಳಿ ಪತ್ರಕರ್ತೆ ಆಟೊವೊಂದನ್ನು ಹಿಡಿದಿದ್ದಾರೆ. ಅಲ್ಲಿಂದ ಆಕೆ ಬೋರಿವಿಲಿಗೆ ತೆರಳುವಾಗ ಮಾರ್ಗ ಮಧ್ಯೆ ಆಟೋ ಚಾಲಕ ಹಸ್ತ ಮೈಥುನ ಮಾಡಿಕೊಳ್ಳುವುದನ್ನು ಗಮನಿಸಿದ್ದಾರೆ. ಮೊದಲಿಗೆ ಆತನಿಗೆ ಆ ಭಾಘದಲ್ಲಿ ಏನೋ ಸಮಸ್ಯೆ ಇದೆ ಎಂದು ಭಾವಿಸಿದ್ದ ಮಹಿಳೆಗೆ ನಂತರ ಆತ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದುದ್ದು ಅವರಿವಿಗೆ ಬಂದಿದೆ.

ಇದಾದ ಮೇಲೆ ಮಹಿಳೆ ಆಟೋ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ ಸುತ್ತಮುತರ್ತಲಿನ ಪರಿಸರ ನಿರ್ಜನವಾಗಿದ್ದರಿಂದ ಸುಮ್ಮನಾಗಿದ್ದಾರೆ. ಇದಾದ ಮೇಲೆ ಆಕೆಯ ಮನೆ ಮುಂದೆ ಆಟೋ ಬಂದು ನಿಂತಿದೆ. ಆಟೋದಿಂದ ಇಳಿದ ಮಹಿಳೆಗೆ ಭಯಾನಕ ದೃಶ್ಯ ಕಂಡಿದೆ. ಆಟೊದಿಂದ ಇಳಿದ ಚಾಲಕ ತನ್ನ ಪ್ಯಾಂಟ್ ಬಿಚ್ಚಿ ಮಹಿಳೆ ಎದುರೆ ಹಸ್ತಮೈಥುನ ಮಾಡಿ ಮುಗಿಸಿದ್ದಾನೆ.

ಆಟೋದಲ್ಲೇ ಚಾಲಕನಿಂದ ಹಸ್ತಮೈಥುನ: ವಿಡಿಯೋ ವೈರಲ್!

ತಕ್ಷಣ ಎಚ್ಚೆತ್ತ ಮಹಿಳೆ ಆಟೋದ ನಂಬರ್ ನೋಟ್ ಮಾಡಿಕೊಂಡಿದ್ದಾರೆ. ಗುರುವಾರ ಪೊಲೀಸರಿಗೆ ದೂರು ನೀಡಿದ್ದು ಅಶಲೀಲವಾಗಿ ವರ್ತಿಸಿದ ಆಟೋ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ.(ಸಾಂದರ್ಭಿಕ ಚಿತ್ರ] 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!