ಮುಂಬೈ ಉಪನಗರ ರೈಲ್ವೆ ಹಳಿಗಳ ಮೇಲೆ ಒಂದೇ ದಿನ 16 ಜನರ ಸಾವು!

By Web DeskFirst Published Jul 20, 2019, 10:24 AM IST
Highlights

ಮುಂಬೈ ಉಪನಗರ ರೈಲ್ವೆ ಹಳಿಗಳ ಮೇಲೆ ಒಂದೇ ದಿನ 16 ಜನರ ಸಾವು| 16 ಜನ ಗಾಯ

ಮುಂಬೈ[ಜು.20]: ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಮಹಾನಗರಿಯ ಸುತ್ತಮುತ್ತಲ ಪ್ರದೇಶಗಳ ಜನರಿಗೆ ಉಪನಗರ ರೈಲು ಸೇವೆ ಜೀವನಾಡಿ. ದುರದೃಷ್ಟವೆಂದರೆ ಗುರುವಾರ ಒಂದೇ ದಿನ ಈ ಉಪನಗರ ರೈಲು ಹಳಿಗಳ ಮೇಲೆ 16 ಜನ ಸಾವನ್ನಪ್ಪಿದ್ದಾರೆ, ಜೊತೆಗೆ 16 ಜನ ಗಾಯಗೊಂಡಿದ್ದಾರೆ.

ಇದು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಒಂದು ದಿನ ನಡೆದ ಅತಿ ಹೆಚ್ಚು ದುರ್ಘಟನೆಯಾಗಿದೆ. ಗುರುವಾರ ಮುಂಬೈ ಉಪನಗರ ರೈಲು ವ್ಯಾಪ್ತಿಗೆ ಬರುವ ಥಾಣೆ ಜಿಲ್ಲೆಯಲ್ಲಿ 7, ಕುರ್ಲಾದಲ್ಲಿ 3, ದೊಂಬಿವಿಲಿ ಮತ್ತು ಕಲ್ಯಾಣ್‌ನಲ್ಲಿ ತಲಾ 2, ವಾಶಿ, ಪನ್ವೇಲ್‌, ಮುಂಬೈ ಸೆಂಟ್ರಲ್‌, ಬಾಂದ್ರಾ, ಬೋರಿವಿಲಿ ಮತ್ತು ವಸಾಯ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ನಿತ್ಯ 80 ಲಕ್ಷ ಜನರನ್ನು ಹೊತ್ತೊಯ್ಯುವ ಮುಂಬೈ ಉಪನಗರ ರೈಲು ವ್ಯಾಪ್ತಿಯಲ್ಲಿ 8-9ರಿಂದ ಜನ ಸಾವನ್ನಪ್ಪುತ್ತಾರೆ. 2017ರಲ್ಲಿ ಮುಂಬೈನ ರೈಲ್ವೆ ಹಳಿಗಳ ಮೇಲೆ 3014, 2018ರಲ್ಲಿ 2734 ಜನ ಸಾವನ್ನಪ್ಪಿದ್ದರು.

click me!