ಬಾಬ್ರಿ ಮಸೀದಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಮುಲಯಾಂ ಸಿಂಗ್

By Suvarna Web DeskFirst Published Feb 15, 2017, 9:32 AM IST
Highlights

 ನಮ್ಮ ಸರ್ಕಾರ ಮುಸ್ಲೀಂ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದ್ದು, ಬಾಬ್ರಿ ಮಸೀದಿ ರಕ್ಷಣೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಲಯಾಂ ಸಿಂಗ್ ಹೇಳಿದ್ದಾರೆ.

ಲಕ್ನೋ (ಫೆ.15): ನಮ್ಮ ಸರ್ಕಾರ ಮುಸ್ಲೀಂ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದ್ದು, ಬಾಬ್ರಿ ಮಸೀದಿ ರಕ್ಷಣೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಲಯಾಂ ಸಿಂಗ್ ಹೇಳಿದ್ದಾರೆ.

 ಲಕ್ನೋದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಅಯೋಧ್ಯೆಯಲ್ಲಿ ಏನೇ ನಡೆಯುತ್ತಿರಲಿ ಆದರೆ ನಮ್ಮ ಸರ್ಕಾರದ ಆದ್ಯತೆಯೇನೇಂದರೆ ಬಾಬ್ರಿ ಮಸೀದಿಯನ್ನು ಕೆಡವುದಲ್ಲ ಯಾಕೆಂದರೆ ಮುಸ್ಲೀಂಮರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವುದಿಲ್ಲವೆಂದು ವೋಟ್ ಬ್ಯಾಂಕ್ ರಾಜಕಾರಣದ ಮಾತುಗಳನ್ನಾಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಾ, ಕಪ್ಪುಹಣವನ್ನು ವಾಪಸ್ ತರುತ್ತೇನೆಂದು ಭರವಸೆ ನೀಡಿದ್ದರು. ಜೊತೆಗೆ ಪ್ರತಿಯೊಬ್ಬ ನಾಗರೀಕನ ಖಾತೆಗೆ 15 ಲಕ್ಷ ರೂ. ಮೊತ್ತವನ್ನು ಕ್ರೆಡಿಟ್ ಮಾಡುವುದಾಗಿ ಹೇಳಿದ್ದರು. 15 ಲಕ್ಷ ಅಲ್ಲ 15 ರೂಪಾಯಿಯನ್ನು ಹಾಕಿಲ್ಲವೆಂದು ಮುಲಯಾಂ ಸಿಂಗ್ ವ್ಯಂಗ್ಯವಾಡಿದ್ದಾರೆ.

click me!