
ಮುಂಬೈ(ಮೇ.06): ಶತಕೋಟ್ಯಾಧಿಪತಿ, ಭಾರತದ ನಂ.1 ಉದ್ಯಮಿ ಮುಖೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಅವರ ವಿವಾಹ ಖ್ಯಾತ ಉದ್ಯಮಿ ದಂಪತಿ ಅಜೆಯ್ ಪಿರಮಾಳಾ ಹಾಗೂ ಸ್ವಾತಿ ಪಿರಮಾಳ್ ಅವರ ಪುತ್ರ ಆನಂದ್ ಪಿರಮಾಳ್ ಅವರೊಂದಿಗೆ ಡಿಸೆಂಬರ್'ನಲ್ಲಿ ನಡೆಯಲಿದೆ.
ಇಶಾ ಹಾಗೂ ಆನಂದ್ ಕುಟುಂಬಗಳು 4 ವರ್ಷಗಳಿಂದ ಚಿರಪರಿಚಿತರು ಜೊತೆಗೆ ಸ್ನೇಹಿತರು ಕೂಡ. 33 ವರ್ಷದ ಆನಂದ್ 26 ವರ್ಷದ ಇಶಾಗೆ ಮಹಾರಾಷ್ಟ್ರದ ಮಹಬಲೇಶ್ವರ ದೇಗುಲದಲ್ಲಿ ಪ್ರೇಮವನ್ನು ನಿವೇದಿಸಿದ್ದರು. ಇದಕ್ಕೆ ಇಶಾ ತಕ್ಷಣವೇ ಒಪ್ಪಿಗೆ ನೀಡಿದ್ದರು.
ಆನಂದ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಹಾರ್ವಾಡ್ ವಿವಿಯಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪೂರೖಸಿದ್ದಾರೆ. ಅಲ್ಲದೆ ಪಿರಮಾಳ್ ರಿಯಾಲಿಟಿ ಹಾಗೂ ಸ್ವಾಸ್ಥ್ಯ ಸಂಸ್ಥೆಯ ಸಂಸ್ಥಾಪಕರು. ಈ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ 40 ಸಾವಿರ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ತಂದೆ ಅಜಯ್ ಪಿರಮಾಳ್ ವಿವಿಧ ಸಂಸ್ಥೆಗಳನ್ನು ಹೊಂದಿರುವ ಪಿರಮಾಳ್ ಸಮೂಹ ಸಂಸ್ಥೆಯ ಅಧ್ಯಕ್ಷರು.
ಇಶಾ ಅಂಬಾನಿ ಯಾಲೆ ವಿವಿಯಲ್ಲಿ ಪದವಿ ಪೂರೖಸಿದ್ದಾರೆ. ರಿಲಯನ್ಸ್ ಜಿಯೋ ಹಾಗೂ ರಿಲಯನ್ಸ್ ರಿಟೇಲ್ಸ್ ಸಂಸ್ಥೆಯ ಮಂಡಳಿಯ ಸದಸ್ಯೆ ಕೂಡ. ಪ್ರಸ್ತುತ ಸ್ಟಾನ್'ಪೋರ್ಡ್ ಬ್ಯುಸಿನೆಸ್ ಸ್ಕೂಲ್'ನಲ್ಲಿ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಮುಖೇಶ್ ಅಂಬಾನಿಯ ಜೇಷ್ಠ ಪುತ್ರ ಆಕಾಶ್ ಅಂಬಾನಿಯ ವಿವಾಹ ವಜ್ರೋದ್ಯಮಿ ಶ್ಲೋಕಾ ಮೆಹ್ತಾ ಪುತ್ರಿಯೊಂದಿಗೆ ನೆರವೇರಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.