ತಮ್ಮಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ ಕೈ ಮುಖಂಡ

By Web DeskFirst Published May 2, 2019, 9:02 AM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಇದೀಗ ಕೈ ಮುಖಂಡರೋರ್ವರು ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸಲು ಮುಂದಾಗಿದ್ದಾರೆ. 

ಬೆಂಗಳೂರು :   ಕಾಂಗ್ರೆಸ್‌ನ ಹಾಲಿ ಸಂಸದರ ಪೈಕಿ ಇಡೀ ದೇಶದಲ್ಲೇ ಟಿಕೆಟ್ ವಂಚಿತರಾದ ಏಕೈಕ ಸಂಸದ ಮುದ್ದಹನುಮೇ ಗೌಡ ಅವರು ಗುರುವಾರ ಮಧ್ಯಾಹ್ನ 12 ಗಂಟೆಗೆ ಧರ್ಮ ಸ್ಥಳದಲ್ಲಿ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸಲು ಸಜ್ಜಾಗಿದ್ದಾರೆ.

ಬುಧವಾರ ಧರ್ಮಸ್ಥಳಕ್ಕೆ ತೆರಳಿದ ಮುದ್ದುಹನುಮೇಗೌಡ ಅವರು ಗುರುವಾರ ಬೆಳಗ್ಗೆ 10 ಗಂಟೆಗೆ ಮಂಜುನಾಥಸ್ವಾಮಿಯ ದರ್ಶನ ಪಡೆದ ಬಳಿಕ ಮಹತ್ವದ ಸುದ್ದಿ ಗೋಷ್ಠಿ ನಡೆಸಿ, ಎಂಪಿ ಟಿಕೆಟ್ ಸೇರಿದಂತೆ ಇಲ್ಲಿಯವರೆಗೆ ನಡೆದ ರಾಜಕೀಯ ಬೆಳವಣಿ ಗೆಗಳ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿ, ಮುಂದಿನ ರಾಜಕೀಯ ನಡೆಯನ್ನು ತಿಳಿಸಲಿ ದ್ದಾರೆ ಎಂದು ಮುದ್ದಹನುಮೇಗೌಡ ಅವರ ಆಪ್ತ ಮೂಲಗಳು ತಿಳಿಸಿವೆ.

ತುಮಕೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುದ್ದಹನು ಮೇಗೌಡರಿಗೆ ಟಿಕೆಟ್ ತಪ್ಪಿಸಿ, ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಲಾಗಿತ್ತು. ಇದರಿಂದಾಗಿ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದರು. ಟಿಕೆಟ್ ಕೈತಪ್ಪಿದಾಗ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದ ಅವರು ನಾಮಪತ್ರ ಹಿಂಪಡೆಯಲು ಮೂರೂವರೆ ಕೋಟಿ ರು. ಪಡೆದಿದ್ದಾರೆ ಎಂಬ ಆರೋಪ  ಕೂಡಾ ಕೇಳಿಬಂದಿತ್ತು. 

ನಾಮಪತ್ರ  ಹಿಂಪಡೆಯುವ ದಿನದಿಂದ ಇಲ್ಲಿಯವರೆಗೂ ಮೌನವಾ ಗಿಯೇ ಉಳಿದಿ ರುವ  ಮುದ್ದಹನುಮೇಗೌಡ, ಗುರುವಾರ ಮೌನ ಮುರಿಯುವ ಸಾಧ್ಯತೆ ಯಿದೆ ಎಂದು ಮೂಲಗಳು ತಿಳಿಸಿವೆ.

click me!