ರಸ್ತೆ ತೆರವುಗೊಳಿಸಲು ಖುದ್ದು ಫೀಲ್ಡಿಗಿಳಿದ ಸಂಸದ ಪ್ರತಾಪ್ ಸಿಂಹ

By Web DeskFirst Published Aug 21, 2018, 11:26 AM IST
Highlights

’ದಕ್ಷಿಣ ಕಾಶ್ಮೀರ’ ಎಂದೇ ಖ್ಯಾತವಾಗಿರುವ ಕೊಡಗು ಈಗ ಅಕ್ಷರಶಃ ಸ್ಮಶಾನದಂತಾಗಿದೆ. ಇಲ್ಲಿನ ಜನರು ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆ ಭಾಗದಲ್ಲೇ ಇದ್ದು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಜನರಿಗೆ ಸ್ಪಂದಿಸುತ್ತಿದ್ದಾರೆ. 
 

ಕೊಡಗು (ಆ. 21): ’ದಕ್ಷಿಣ ಕಾಶ್ಮೀರ’ ಎಂದೇ ಖ್ಯಾತವಾಗಿರುವ ಕೊಡಗು ಈಗ ಅಕ್ಷರಶಃ ಸ್ಮಶಾನದಂತಾಗಿದೆ. ಇಲ್ಲಿನ ಜನರು ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆ ಭಾಗದಲ್ಲೇ ಇದ್ದು ಸಂತ್ರಸ್ತ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಜನರಿಗೆ ಸ್ಪಂದಿಸುತ್ತಿದ್ದಾರೆ. 

ಸೋಮವಾರ ಪೇಟೆ ತಾಲ್ಲೂಕಿನ ಮಾದಾಪುರ , ಹಟ್ಟಿಹೊಳೆ ಮತ್ತು  ಮುಕ್ಕೋಡ್ಲು ವಿನಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಅಲ್ಲಿದೆ ಖುದ್ದು ಪ್ರತಾಪ್ ಸಿಂಹ ಭೇಟಿ ನೀಡಿ ಸಾರ್ವಜನಿಕರ ಜೊತೆ ಸೇರಿ ಕಾರ್ಯಾಚರಣೆಗೆ ಕೈ ಜೋಡಿಸಿದರು. ಪ್ರತಾಪ್ ಸಿಂಹರ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

 

 

ಸುಂಟಿಕೊಪ್ಪ ಹಾಗೂ ಮಾದಾಪುರದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಲಾಯಿತು ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಯಿತು.

 

click me!