ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಾಳೆ ಚರ್ಚೆ?

Published : Jun 12, 2017, 10:50 AM ISTUpdated : Apr 11, 2018, 12:37 PM IST
ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಾಳೆ ಚರ್ಚೆ?

ಸಾರಾಂಶ

ವಿಧಾನ ಪರಿಷತ್ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ಕುರಿತ ನೋಟಿಸ್‌ ಗಡುವು ಸೋಮವಾರಕ್ಕೆ ಮುಗಿಯ ಲಿದ್ದು, ಮಂಗಳವಾರ ಸದನದಲ್ಲಿ ಚರ್ಚೆಯಾಗಲಿದೆ. ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಸುವ ಪ್ರಯತ್ನವಾಗಿ ಕಾಂಗ್ರೆಸ್‌ ಸದಸ್ಯರು ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ಮೇ 30ಕ್ಕೆ ನೋಟಿಸ್‌ ಸಲ್ಲಿಸಿದ್ದರು. ಅದು ಸದನದಲ್ಲಿ ಚರ್ಚೆಯಾಗಲು 14 ದಿನಗಳ ಸಮಯ ಬೇಕಾಗುತ್ತದೆ.

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ಕುರಿತ ನೋಟಿಸ್‌ ಗಡುವು ಸೋಮವಾರಕ್ಕೆ ಮುಗಿಯ ಲಿದ್ದು, ಮಂಗಳವಾರ ಸದನದಲ್ಲಿ ಚರ್ಚೆಯಾಗಲಿದೆ.

ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಸುವ ಪ್ರಯತ್ನವಾಗಿ ಕಾಂಗ್ರೆಸ್‌ ಸದಸ್ಯರು ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ಮೇ 30ಕ್ಕೆ ನೋಟಿಸ್‌ ಸಲ್ಲಿಸಿದ್ದರು. ಅದು ಸದನದಲ್ಲಿ ಚರ್ಚೆಯಾಗಲು 14 ದಿನಗಳ ಸಮಯ ಬೇಕಾಗುತ್ತದೆ.

ಹೀಗಾಗಿ ಉಗ್ರಪ್ಪ ಸಲ್ಲಿಸಿದ್ದ ನೋಟಿಸ್‌ಗೆ ಜೂನ್‌12ರಂದು 14 ದಿನಗಳಾಗುತ್ತವೆ. ಜೂನ್‌ 13ರಂದು ಸದನದ ಕಲಾಪ ಪಟ್ಟಿಯಲ್ಲಿ ಈ ನೋಟಿಸ್‌ ವಿಚಾರವನ್ನು ಸೇರಿಸಬೇ ಕಾಗುತ್ತದೆ. ಅಂದು ಸಭಾಪತಿ ಅವರು ಅವಕಾಶ ನೀಡಿದಾಗ ನೋಟಿಸ್‌ ನೀಡಿದ್ದವರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೇಳಬೇಕಾಗತ್ತದೆ. ಆ ಸಂದರ್ಭದಲ್ಲಿ ಕನಿಷ್ಠ 10 ಮಂದಿ ಬೆಂಬಲ ನೀಡಬೇಕಾಗುತ್ತದೆ. ಆನಂತರ ಸಭಾಪತಿ ಸ್ಥಾನದಲ್ಲಿರುವವರ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶ ಲಭಿಸುತ್ತದೆ. ಅಲ್ಲಿಂದ 5 ದಿನಗಳ ಒಳಗಾಗಿ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗುತ್ತದೆ.

ಅಂದರೆ ಜೂನ್‌ 13ರಂದು ಸದನದಲ್ಲಿ ಪ್ರಸ್ತಾಪವಾದರೆ ನಂತರದ ಮೂರು ದಿನಗಳಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಿ ಸಭಾಪತಿ ಅವರನ್ನು ಕೆಳಗಿಳಿಸಬೇಕಾಗುತ್ತದೆ. ಏಕೆಂದರೆ, ಸದನ ಜೂನ್‌ 16ರಂದು ಅಂತ್ಯವಾಗುವುದರಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ತೀರಾ ಕಡಿಮೆ ಸಮಯ ಇರುತ್ತದೆ. ಆದ್ದರಿಂದ ಕಾಂಗ್ರೆಸ್‌ ಮಾಡಿರುವ ಈ ಪ್ರಯತ್ನಕ್ಕೆ ಜೆಡಿಎಸ್‌ ಬೆಂಬಲ ನೀಡಿದರೆ ಕೇವಲ ಮೂರೇ ದಿನಗಳಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಯಶ ಸಾಧಿಸಬಹುದು. ಇಲ್ಲವಾದರೆ ಈ ಅಧಿವೇಶನದಲ್ಲಿ ಪದಚ್ಯುತಿ ಕಷ್ಟಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಷತ್ತಿನ ಒಟ್ಟು 75 ಮಂದಿ ಸದಸ್ಯ ಬಲದಲ್ಲಿ ಕಾಂಗ್ರೆಸ್‌ 32 ಸದಸ್ಯರನ್ನು ಹೊಂದಿದ್ದು, ಪಕ್ಷೇತರರಾದ ಬೈರತಿ ಸುರೇಶ್‌, ಎಂ.ಡಿ.ಲಕ್ಷ್ಮೇನಾರಾಯಣ, ವಿವೇಕರಾವ್‌ ಪಾಟೀಲ್‌ರಿಂದಾಗಿ ಕಾಂಗ್ರೆಸ್‌ ಬಲ 35ಕ್ಕೇರಿದೆ. ಆದರೆ ಸಭಾಪತಿ ಸೇರಿ ಬಿಜೆಪಿ 23 ಮಂದಿ ಸದಸ್ಯ ಬಲ ಹೊಂದಿದೆ. ಇನ್ನು ಜೆಡಿಎಸ್‌ 13 ಸದಸ್ಯರನ್ನು ಹೊಂದಿದೆ. ಇದಲ್ಲದೆ ಪಕ್ಷೇತರರಾದ ಡಿ.ಯು. ಮಲ್ಲಿಕಾರ್ಜುನ್‌ ಮತ್ತು ಯತ್ನಾಳ್‌ ಕೂಡ ಇದ್ದಾರೆ. ನಾಮ ನಿರ್ದೇಶನ ಸದಸ್ಯರು ಒಂದು ಸ್ಥಾನ ಮತ್ತು ವಿಮಲಾಗೌಡ ನಿಧನದಿಂದ ತೆರವಾಗಿರುವ ಒಂದು ಸ್ಥಾನ ಖಾಲಿ ಇದೆ. ಒಟ್ಟಾರೆ 73 ಸದಸ್ಯ ಬಲವಿದೆ. ಆದರೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಯಶ ಸಾಧಿಸಲು ಕಾಂಗ್ರೆಸ್ಸಿಗೆ 38 ಮತ ಬೇಕಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!