ಯುವಕನ ಮೇಲೆ ವಿವಾಹಿತೆಯ ಪ್ರೇಮಾಂಕುರ: ಪ್ರೇಮ ಪುರಣಕ್ಕೆ ಟ್ವಿಸ್ಟ್

By Web Desk  |  First Published Dec 21, 2018, 2:00 PM IST

ಪ್ರಿಯಕರನ ಮದುವೆಗೆ ಬೇಸತ್ತು ಒಂದೇ ಹಗ್ಗದಲ್ಲಿ ತಾಯಿ, ಮಗಳು ಆತ್ಮಹತ್ಯೆ ಪುರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 


ದಾವಣಗೆರೆ, (ಡಿ.21): ದಾವಣಗೆರೆಯ ಎಂಸಿಸಿಬಿ ಬ್ಲಾಕ್‍ ನ ಕುವೆಂಪು ನಗರದಲ್ಲಿ ಒಂದೇ ಹಗ್ಗದಲ್ಲಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ವಸಂತಾ ತನ್ನ ಪ್ರಿಯಕರನ ಮದುವೆ ಹಿನ್ನೆಲೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ತಾನು ಆತ್ಮಹತ್ಯೆಗೆ ಶರಣಾಗಿದ್ದು ಅಲ್ಲದೇ ತನ್ನ ಎಂಟು ವರ್ಷದ ಮಗಳನ್ನು ವಸಂತ ನೇಣಿಗೆ ಹಾಕಿದ್ದಾಳೆ.

Tap to resize

Latest Videos

ವಿವಾಹಿತೆ ವಸಂತಾ ರಾಕೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಂದು (ಶುಕ್ರವಾರ) ರಾಕೇಶ್ ಮದುವೆ ಇದ್ದು, ಪ್ರಿಯಕರ ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗುತ್ತಿದ್ದಾನೆ ಎನ್ನುವ ವಿಚಾರ ತಿಳಿದು ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಗ ವಿನೋಬ ನಗರದ ಸುಕೃತಿ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯಿಂದ ರಾಕೇಶ್ ನನ್ನು ಮಂಟಪದಿಂದ ಬಡಾವಣೆ ಪೊಲೀಸರು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಮದುವೆ ಮುರಿದು ಬಿದ್ದಿದ್ದು ಹಸಮಣೆ ಏರಬೇಕಿದ್ದ ರಾಕೇಶ್ ಈಗ ಪೊಲೀಸ್ ಠಾಣೆಯಲ್ಲಿ ಕೂತಿದ್ದಾನೆ.

click me!