ಡೆಂಗ್ಯೂ, ಝೀಕಾ ತಡೆಯಲು ಸೊಳ್ಳೆ ಕರುಳಿನಲ್ಲೇ ಇದೆ ಪರಿಹಾರ

By Suvarna Web DeskFirst Published Feb 19, 2018, 4:25 PM IST
Highlights

ಡೆಂಗ್ಯೂ, ಚಿಕುನ್‌ಗುನ್ಯಾ, ಝೀಕಾ ಹಾಗೂ ಹಳದಿ ಜ್ವರ ಸೇರಿದಂತೆ ಅನೇಕ ರೋಗಗಳನ್ನು ತರುವ ಸೊಳ್ಳೆಗಳಿಂದ ಮನುಷ್ಯನ ನೆಮ್ಮದಿಯೇ ಹಾಳಾಗುತ್ತದೆ. ಈ ಆತಂಕದ ಜತೆ ಜತೆಗೇ ಸಂತಸದ ಸುದ್ದಿಯೊಂದಿದೆ. ಬಹುತೇಕ ರೋಗಗಳನ್ನು ಹರಡುವ ಏಡೇಸ್ ಏಜಿಪ್ಟಿ ಎಂಬ ಸೊಳ್ಳೆಯ ಕರುಳಿನಲ್ಲಿ ಸೋಂಕು ಹರಡುವ ಅಂಶಗಳಿದ್ದು, ಇದರ ಕಾರ್ಯವನ್ನೇ ಕುಂಠಿತಗೊಳಿಸಿ, ಸೋಂಕು ಹರಡದಂತೆ ಮಾಡಬಹುದಾಗಿದೆ. 

ಇನ್ನೇನು ಚಳಿಗಾಲ ಮುಗೀತು. ಬಿಸಿಲು ಹೆಚ್ಚುತ್ತಿದೆ. ಋತು ಬದಲಾಗುವ ಈ ಪರ್ವದಲ್ಲಿ ಕಾಯಿಲೆಗಳು ಮನುಷ್ಯನನ್ನು ಕಾಡೋದು ಸಹಜ. ಅಷ್ಟೇ ಅಲ್ಲ, ಬೇಸಿಗೆ ಬಂತೆಂದರೆ ಸಾಕು ಸೊಳ್ಳೆ ಕಾಟವೂ ಹೆಚ್ಚುತ್ತದೆ. 

ಡೆಂಗ್ಯೂ, ಚಿಕುನ್‌ಗುನ್ಯಾ, ಝೀಕಾ ಹಾಗೂ ಹಳದಿ ಜ್ವರ ಸೇರಿದಂತೆ ಅನೇಕ ರೋಗಗಳನ್ನು ತರುವ ಸೊಳ್ಳೆಗಳಿಂದ ಮನುಷ್ಯನ ನೆಮ್ಮದಿಯೇ ಹಾಳಾಗುತ್ತದೆ. ಈ ಆತಂಕದ ಜತೆ ಜತೆಗೇ ಸಂತಸದ ಸುದ್ದಿಯೊಂದಿದೆ. ಬಹುತೇಕ ರೋಗಗಳನ್ನು ಹರಡುವ ಏಡೇಸ್ ಏಜಿಪ್ಟಿ ಎಂಬ ಸೊಳ್ಳೆಯ ಕರುಳಿನಲ್ಲಿ ಸೋಂಕು ಹರಡುವ ಅಂಶಗಳಿದ್ದು, ಇದರ ಕಾರ್ಯವನ್ನೇ ಕುಂಠಿತಗೊಳಿಸಿ, ಸೋಂಕು ಹರಡದಂತೆ ಮಾಡಬಹುದಾಗಿದೆ. 

ಲಕ್ಷಾಂತರ ಮಂದಿಯ ಜೀವವೂ ತೆಗೆಯುವ ಈ ಸೊಳ್ಳೆಯಿಂದಲೇ ಸೋಂಕು ಹರಡುವುದನ್ನೂ ನಿಲ್ಲಿಸಬಹುದು, ಎಂಬುದನ್ನು ಕೊಲೊರಾಡೋ ಸ್ಟೇಟ್ ವಿವಿ ಮತ್ತು ಪರ್ಡ್ಯೂ ಇನ್ಸಿಟಿಟ್ಯೂಟ್ ನಡೆಸಿದ ಅಧ್ಯಯನ ಸ್ಪಷ್ಟಪಡಿಸಿದೆ. ಸೊಳ್ಳೆ ಬದುಕಲು ಸಹಕಾರಿಯಾಗುವ ಹಾಗೂ ಸೋಂಕು  ಕೊಬ್ಬು, ಸಕ್ಕರೆಯಂಶ, ವಿಟಮಿನ್ಸ್ ಮತ್ತು ಹಾರ್ಮೋನ್ಸ್  ಮುಂತಾದವನ್ನು ಸೊಳ್ಳೆಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಬಹುದೆಂಬುವುದು ಇದೀಗ ಅಧ್ಯಯನ ಸ್ಪಷ್ಟಪಡಿಸಿದೆ.

ಸೊಳ್ಳೆಯ ಪಚನ ಕ್ರಿಯೆಯನ್ನು ಸಂಕೀರ್ಣಗೊಳಿಸಿ, ವೈರಸ್‌ನ ಪ್ರತಿರೋಧ ಶಕ್ತಿಯನ್ನೇ ಕುಂಠಿತಗೊಳಿಸುವಂತೆ ಮಾಡಬಹುದು. ಸೊಳ್ಳೆಯನ್ನು ನಾಶ ಮಾಡುವುದು ಅಥವಾ ಅದರ ಸಂತತಿ ಹೆಚ್ಚಾಗದಂತೆ ಮಾಡಲಾಗುತ್ತದೆ. ಇದಲ್ಲದೇ, ಸೊಳ್ಳೆಯಲ್ಲಿ ಸೋಂಕಿಗೆ ಕಾರಣವಾಗುವ ಅಂಶವನ್ನು ನಾಶಗೊಳಿಸುವುದರಿಂದ, ಕಚ್ಚಿದರೂ ರೋಗ ಹರಡದಂತೆ ಮಾಡುವಲ್ಲಿ ಈ ಅಧ್ಯಯನ ಸಹಕರಿಸಲಿದೆ.
 
click me!