ಭಾರತದಲ್ಲಿ 60 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಪಂಪ್'ಗಳು : ವಿಶ್ವದಲ್ಲಿ 3ನೇ ಸ್ಥಾನ

By Suvarna Web DeskFirst Published Nov 29, 2017, 8:19 PM IST
Highlights

ಇಷ್ಟು ಮಳಿಗೆಗಳಲ್ಲಿ ಶೇ.10 ಕ್ಕೂ ಅಧಿಕ ಮಳಿಗೆಗಳನ್ನು ರಿಲಯನ್ಸ್ ಹಾಗೂ ಎಸ್ಸಾರ್ ಇಂಧನ ಮಳಿಗೆಗಳೆ ನಿಯಂತ್ರಿಸಲ್ಪಡುತ್ತಿವೆ

ನವದೆಹಲಿ(ನ.29): ಭಾರತದಲ್ಲಿ ಕಳೆದ 6 ವರ್ಷಗಳಿಂದ ಪೆಟ್ರೋಲ್ ಪಂಪ್'ಗಳ ಸಂಖ್ಯೆಯಲ್ಲಿ ಶೇ.45 ರಷ್ಟು ಏರಿಕೆಯಾಗಿದ್ದು, ವಿಶ್ವದಲ್ಲಿ 3ನೇ ಅತೀ ಹೆಚ್ಚು ಪಂಪ್'ಗಳ ಮಳಿಗೆಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ.

ಅಕ್ಟೋಬರ್ ಕೊನೆಯ ವೇಳೆಗೆ  ಭಾರತದಲ್ಲಿ 60,799 ಮಳಿಗೆಗಳಿರುವ ಬಗ್ಗೆ ಇಂಧನ ಇಲಾಖೆಯ ಪಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದುಬಂದಿದೆ. ಅಮೆರಿಕಾ ಹಾಗೂ ಚೀನಾ ಬಿಟ್ಟರೆ ಭಾರತದಲ್ಲೇ ಅತೀ ಹೆಚ್ಚು ಪೆಟ್ರೋಲ್ ಹಾಗೂ ಡಿಸೇಲ್ ಮಳಿಗೆಗಳಿವೆ. ಇವೆರಡು ರಾಷ್ಟ್ರಗಳು ತಲಾ ಒಂದು ಲಕ್ಷಕ್ಕಿಂತ ಪೆಟ್ರೋಲ್ ಪಂಪ್'ಗಳನ್ನು ಹೊಂದಿವೆ.

ಇಷ್ಟು ಮಳಿಗೆಗಳಲ್ಲಿ ಶೇ.10 ಕ್ಕೂ ಅಧಿಕ ಮಳಿಗೆಗಳನ್ನು ರಿಲಯನ್ಸ್ ಹಾಗೂ ಎಸ್ಸಾರ್ ಇಂಧನ ಮಳಿಗೆಗಳೆ ನಿಯಂತ್ರಿಸಲ್ಪಡುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್  26,489, ಹಿಂದುಸ್ತಾನ್ ಪೆಟ್ರೋಲಿಯಂ 14,675, ಭಾರತ್ ಪೆಟ್ರೋಲಿಯಂ 14,161 ಪಂಪ್'ಗಳನ್ನು ನಿಯಂತ್ರಿಸುತ್ತಿವೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಪೆಟ್ರೋಲ್ ಪಂಪ್'ಗಳನ್ನು ಕಡಿಮೆಗೊಳಿಸುತ್ತಿದ್ದು, ಇದರ ಬದಲಾಗಿ ವಿದ್ಯುತ್ ಚಾಲಿತ ಅಥವಾ ಪೆಟ್ರೋಲ್'ಯೇತರ ವಾಹನಗಳನ್ನು ಬಳಸುತ್ತಿವೆ.

click me!