72 ಗಂಟೆಯಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ

By Web DeskFirst Published May 29, 2019, 3:33 PM IST
Highlights

ಇನ್ನು 72 ಗಂಟೆಯಲ್ಲಿ ಮುಂಗಾರು ಪ್ರವೇಶಿಸಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನವದೆಹಲಿ : ಮುಂಗಾರು ಮಳೆ ಬಂಗಾಳ ಕೊಲ್ಲಿಯ ಆಸುಪಾಸಿನ ಪ್ರದೇಶಗಳಲ್ಲಿ ಅವಧಿಗೂ ಮುನ್ನವೇ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಅಂಡಮಾನ್ ಹಾಗೂ ದಕ್ಷಿಣ ಅಂಡಮಾನ್ ಸಮುದ್ರ ತೀರಗಳಿಗೆ ಮುಂದಿನ 72 ಗಂಟೆಯಲ್ಲಿ ಮುಂಗಾರು ಪ್ರವೇಶಿಬಹುದು ಎನ್ನಲಾಗಿದೆ. 

ಮೇ 18 ರಂದೇ ಮುಂಗಾರು ಪ್ರವೇಶಿಸಿದ್ದು, ವೇಗದ ಮಿತಿ ಕಡಿಮೆ ಇದ್ದ ಕಾರಣದಿಂದ ಮುಂಗಾರು ತಡೆಯಲ್ಪಟ್ಟಿದ್ದು, ಮುಂದಿನ 4- 5 ದಿನದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ  ಇಲಾಖೆ ಹೇಳಿದೆ. 

ಕೇರಳಕ್ಕೆ ಜೂನ್ 6 ರಂದು ಮುಂಗಾರು ಪ್ರವೇಶಿಸಲಿದೆ. ಸಾಮಾನ್ಯಕ್ಕಿಂತ 6 ದಿನ ತಡವಾಗಿ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಇದೀಗ ನಿರೀಕ್ಷೆಗಿಂತ ಮುಂಚೆಯೇ ಮಳೆ ಸುರಿವ ಸೂಚನೆ ನೀಡಿದೆ.

ಈಗಾಗಲೇ ಹಲವು ಪ್ರದೇಶಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅವಾಂತರ ಸೃಷ್ಟಿಸಿತ್ತು.

click me!