
ಬೆಂಗಳೂರು(ಡಿ.4): ರೇಸ್ ಕೋರ್ಸ್ ಬಳಿ ಸಿಸಿಬಿ ಪೊಲೀಸರೇ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ಎಸಿಪಿ ಮರಿಯಪ್ಪ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ಹಿರಿಯ ಅಕಾರಿಯೊಬ್ಬರು `ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಸಿಸಿಬಿಯ ಎಎಸ್ಐ ಹೊಂಬಾಳೇಗೌಡ, ಕಾನ್ಸ್’ಟೇಬಲ್’ಗಳಾದ ಗಂಗಾಧರ್ ಹಾಗೂ ನರಸಿಂಹಮೂರ್ತಿ ಎಸಿಪಿ ಮರಿಯಪ್ಪ ಅವರ ಅಡಿಯಲ್ಲಿ ಕೆಲಸಕ್ಕಿದ್ದರು.
ಹೀಗಾಗಿ ಪ್ರಕರಣದ ಸಂಬಂಧ ಅವರನ್ನು ಪ್ರಶ್ನಿಸಲಾಗಿದೆ. ಇನ್ನು ಪ್ರಕರಣದಲ್ಲಿ ಬಂಧಿತನಾಗಿರುವ ರಿಯಲ್ ಎಸ್ಟೇಟ್ ಏಜೆಂಟ್ ಯಲಹಂಕ ನಿವಾಸಿ ರಮೇಶ ರಾಜ್ ಪೊಲೀಸರಿಗೆ ಸಹಾಯ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಸ್ಟ್ರಾಂಗ್ ರೂಮ್’ನಲ್ಲಿ ತೆಗೆಯಲಾಗಿದ್ದ ಹಣ ಹೊಂದಿರುವ ಸಲುವಾಗಿ ಸಿಸಿಬಿ ಪೊಲೀಸರು ನನ್ನನ್ನು ಸಂಪರ್ಕಿಸಿದ್ದರು. ಸುಬಾನಾ ಹಣ ಬದಲಾವಣೆಗೆ ಬರುತ್ತಿರುವ ಮಾಹಿತಿಯನ್ನು ಪಡೆದು ಸಿಸಿಬಿ ಪೊಲೀಸರ ಜತೆ ಸೇರಿ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾನೆ.
ತಲೆ ಮರೆಸಿಕೊಂಡಿರುವ ಸಿಸಿಬಿ ಎಎಸೈ ಹಾಗೂ ಇಬ್ಬರು ಪೇದೆಗಳು ಸಿಕ್ಕರೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು. ವಿಜಯನಗರದ ಬಿಎಂಟಿಸಿ ಬಸ್ ಚಾಲಕ ಸುಬಾನಾ ಮನ್ನಂಗಿ ಎಂಬುವರು ನ.25 ರಂದು ರಾತ್ರಿ 8ರ ಸುಮಾರಿಗೆ ಪರಿಚಯಸ್ಥ ರಾಗಿಣಿ, ರತ್ನಾ ಎಂಬುವರೊಂದಿಗೆ 1 ಕೋಟಿ ರು. ಹಳೇ ನೋಟು ಬದಲಾವಣೆಗೆ ರೇಸ್ಕೋರ್ಸ್ ಬಳಿ ಬಂದಿದ್ದರು. ಈ ವೇಳೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಅಪರಿಚಿತರು 1 ಕೋಟಿ ರು. ಹಳೇ ನೋಟುಗಳನ್ನು ಕೊಂಡೊಯ್ದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.