
ಬೆಂಗಳೂರು (ಜ.23): ಹಿರಿಯ ರಾಜಕಾರಣಿ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಂ.ವೀರಪ್ಪ ಮೊಯ್ಲಿ ಅವರ ಮೂರನೇ ಮಹಾಕಾವ್ಯ ‘ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ’ ಶ್ರವಣಬೆಳಗೊಳದಲ್ಲಿ ಬುಧವಾರ (ಜ.24) ಲೋಕಾರ್ಪಣೆಗೊಳ್ಳಲಿದೆ.
ಬಾಹುಬಲಿ ಕುರಿತು ಮಹಾಕಾವ್ಯ ರಚಿಸುವ ವೇಳೆ ಮನಸ್ಸು ಸಾತ್ವಿಕವಾಗಿರಬೇಕು ಎಂಬ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಮೀನು ಸೇವನೆಯನ್ನು ತ್ಯಜಿಸಿದ್ದೇನೆ ಎಂದು ಎಂ.ವೀರಪ್ಪ ಮೊಯ್ಲಿ ಹೇಳಿದರು. ತಪಸ್ವಿ ಮನಸ್ಥಿತಿ ಹೊಂದಿದ್ದರೆ ಮಾತ್ರ ಇಂತಹ ಮಹಾಕಾವ್ಯ ರಚಿಸಲು ಸಾಧ್ಯವಾಗಲಿದ್ದು, ಮನದಲ್ಲಿ ಮೂಡುವ ಹಿಂಸಾತ್ಮಕ ಗುಣಗಳನ್ನು ಚಿವುಟಿ ಹಾಕಬೇಕಾಗುತ್ತದೆ. ಹೀಗಾಗಿ ಬಾಹುಬಲಿ ಕುರಿತ ಮಹಾಕಾವ್ಯ ಬರೆಯಲು ಒಂದು ವರ್ಷದಿಂದ ಮೀನು ಸೇವನೆ ಯನ್ನು ತ್ಯಜಿಸಿದ್ದೇನೆ ಎಂದರು.
ಶ್ರವಣಬೆಳಗೊಳದ ಗೊಮ್ಮಟನಗರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಹಾಕಾವ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಮಾಹೇಶ್ವರಿ ಪ್ರಕಾಶನವುಮಹಾಕಾವ್ಯವನ್ನು ಹೊರತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.