ಗೋರಕ್ಷಕರ ಹಿಂಸೆಗೆ ಭಾಗವತ್‌ ಖಂಡನೆ

Published : Apr 10, 2017, 05:32 AM ISTUpdated : Apr 11, 2018, 01:08 PM IST
ಗೋರಕ್ಷಕರ ಹಿಂಸೆಗೆ ಭಾಗವತ್‌ ಖಂಡನೆ

ಸಾರಾಂಶ

ಮಹಾವೀರ ಜಯಂತಿಯ ಅಂಗವಾಗಿ ಭಾನುವಾರ ಮಾತನಾಡಿದ ಅವರು, ಗೋವುಗಳ ರಕ್ಷಣೆ ಹೆಸರಿನಲ್ಲಿ ಬೇರೊಬ್ಬರ ನಂಬಿಕೆಗೆ ಘಾಸಿಯಾಗುವಂತಹ ಕೆಲಸ ಗಳನ್ನು ಮಾಡಬಾರದು. ಹಿಂಸಾಚಾರವನ್ನೂ ನಡೆಸಬಾ ರದು. ಇದರಿಂದಾಗಿ ಗೋವು ರಕ್ಷಕರ ಪ್ರಯತ್ನಕ್ಕೇ ಕೆಟ್ಟಹೆಸರು ಬರಲಿದೆ. ಸಂವಿಧಾನ ಹಾಗೂ ಕಾನೂನು ಪಾಲಿಸಿಕೊಂಡು ಗೋವುಗಳನ್ನು ರಕ್ಷಿಸಬೇಕು ಎಂದು ಹೇಳಿದರು.

ನವದೆಹಲಿ: ಗೋಹತ್ಯೆ ಎಂಬುದು ದುರಾಚಾ ರವಾಗಿದ್ದು, ಅದನ್ನು ನಿಲ್ಲಿಸಲು ದೇಶಾದ್ಯಂತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಆಗ್ರಹಿಸಿದ್ದಾರೆ. ಇದೇ ವೇಳೆ, ಗೋವುಗಳ ರಕ್ಷಣೆ ಹೆಸರಲ್ಲಿ ಗೋರಕ್ಷಕರು ಹಿಂಸಾಚಾರ ನಡೆಸುತ್ತಿರುವುದನ್ನು ಖಂಡಿಸಿ ದ್ದಾರೆ. ಕಾನೂನು ಹಾಗೂ ಸಂವಿಧಾನ ಬದ್ಧವಾಗಿ ಗೋವುಗಳನ್ನು ರಕ್ಷಿಸಲು ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.

ಮಹಾವೀರ ಜಯಂತಿಯ ಅಂಗವಾಗಿ ಭಾನುವಾರ ಮಾತನಾಡಿದ ಅವರು, ಗೋವುಗಳ ರಕ್ಷಣೆ ಹೆಸರಿನಲ್ಲಿ ಬೇರೊಬ್ಬರ ನಂಬಿಕೆಗೆ ಘಾಸಿಯಾಗುವಂತಹ ಕೆಲಸ ಗಳನ್ನು ಮಾಡಬಾರದು. ಹಿಂಸಾಚಾರವನ್ನೂ ನಡೆಸಬಾ ರದು. ಇದರಿಂದಾಗಿ ಗೋವು ರಕ್ಷಕರ ಪ್ರಯತ್ನಕ್ಕೇ ಕೆಟ್ಟಹೆಸರು ಬರಲಿದೆ. ಸಂವಿಧಾನ ಹಾಗೂ ಕಾನೂನು ಪಾಲಿಸಿಕೊಂಡು ಗೋವುಗಳನ್ನು ರಕ್ಷಿಸಬೇಕು ಎಂದು ಹೇಳಿದರು.

ರಾಜಸ್ಥಾನದ ಅಳ್ವರ್‌ನಲ್ಲಿ ಗೋರಕ್ಷಕರ ಗುಂಪೊಂದು ಮುಸಲ್ಮಾನ ವ್ಯಕ್ತಿಯನ್ನು ಬಡಿದು ಕೊಂದಿತ್ತು. ಇದರ ಬೆನ್ನಲ್ಲೇ ಭಾಗವತ್‌ ನೀಡಿರುವ ಈ ಹೇಳಿಕೆ ಮಹತ್ವದ್ದಾಗಿದೆ. ಹಲವು ರಾಜ್ಯಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು (ಆರ್‌ಎಸ್‌ಎಸ್‌ ಹಿನ್ನೆಲೆಯ ಬಿಜೆಪಿ ನಾಯಕರು) ಅಧಿಕಾರದಲ್ಲಿದ್ದಾರೆ. ಅವರು ಗೋಹತ್ಯೆ ನಿಷೇಧಕ್ಕೆ ಕಾನೂನು ತಂದಿದ್ದಾರೆ. ಸ್ಥಳೀಯ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಿಕೊಂಡು ಇತರೆ ರಾಜ್ಯ ಸರ್ಕಾರಗಳೂ ಅಂತಹುದೇ ಕಾಯ್ದೆ ತರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನೊಬ್ಬ ಪಶು ವೈದ್ಯ. ಹೀಗಾಗಿ ಗೋಮೂತ್ರ, ಸಗಣಿ ಸೇರಿದಂತೆ ದೇಶಿ ಗೋವುಗಳ ಉಪಯುಕ್ತತೆಯ ಅರಿವಿದೆ. ಇದನ್ನು ವೈಜ್ಞಾನಿಕ ಸಂಸ್ಥೆಗಳೂ ಒಪ್ಪಿಕೊಂಡಿವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?
ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಕರವೇ ಕೆಂಡ; ನಾರಾಯಣ ಗೌಡರ ಹೋರಾಟಕ್ಕೆ ಮಣಿದು ಹೊಸ ಅಧಿಸೂಚನೆ ಹೊರಡಿಸಿದ ಇಲಾಖೆ!