ಅಧಿಕಾರಿಗಳಿಗೆ ಮೋದಿ ಪಂಚ ವಾರ್ಷಿಕ ಯೋಜನೆ

By Web DeskFirst Published Jun 11, 2019, 12:26 PM IST
Highlights

ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ ಮೋದಿ| ಅಧಿಕಾರಿಗಳಿಗೆ ಮೋದಿ ಪಂಚ ವಾರ್ಷಿಕ ಯೋಜನೆ| 

 

ನವದೆಹಲಿ[ಜೂ.11]: ಪ್ರತಿಯೊಂದು ಇಲಾಖೆಗಳಿಗೂ ಐದು ವರ್ಷಗಳ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ ಮೋದಿ, ಪ್ರತಿಯೊಂದು ಸಚಿವಾಲಯವೂ ಐದು ವರ್ಷಗಳಲ್ಲಿ ಜನರ ಜನರ ಆಶೋತ್ತರದಂತೆ ಕಾರ್ಯನಿರ್ವಹಿಸಲು ಪರಿಣಾಮಕಾರಿಯಾದ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಇದಕ್ಕೆ 100 ದಿನಗಳಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಜನರ ಜೀವನ ಗುಣಮಟ್ಟಹಾಗೂ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಒತ್ತು ನೀಡಬೇಕಿದೆ. ಮೇಕ್‌ ಇನ್‌ ಇಂಡಿಯಾಕ್ಕೆ ಒತ್ತು ನೀಡುವ ಮೂಲಕ ಭಾರತವನ್ನು 5 ಲಕ್ಷ ಕೋಟಿ ಡಾಲರ್‌ ಸಾಮರ್ಥ್ಯದ ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಅಧಿಕಾರಿಗಳು ಕಾರ್ಯವನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ.

Had an extensive interaction with Secretaries to the Government of India. Discussed governance related issues including:

Boosting 'Ease of Living.'

Focus on water, agriculture & animal husbandry.

Making business easer.

More technology in government. https://t.co/NiWzRIMHWT pic.twitter.com/nFdaOUambU

— Narendra Modi (@narendramodi)

ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿರ್ಮಲಾ ಸೀತಾಮನ್‌ ಹಾಗೂ ಜಿತೇಂದ್ರ ಸಿಂಗ್‌ ಭಾಗಿಯಾಗಿದ್ದರು.

click me!