ಚೀನಾ ಎಚ್ಚರಿಕೆಯ ಹೊರತಾಗಿಯೂ ಬಂದರು ಬಗ್ಗೆ ಚರ್ಚಿಸಿದ ಮೋದಿ

By Suvarna Web DeskFirst Published Nov 12, 2016, 3:09 PM IST
Highlights

ಚೀನಾಗೆ ಆತಂಕ ಉಂಟುಮಾಡುವಂತಹ ಮತ್ತೊಂದು ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ, ಇರಾನ್ ನಲ್ಲಿ ಭಾರತದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಚಾಬಹಾರ್ ಬಂದರು ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.  

ನವದೆಹಲಿ (ನ.12): ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಎಚ್ಚರಿಕೆ ನೀಡಿದ್ದರ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ- ಜಪಾನ್ ಪ್ರಧಾನಿ ಶಿಂಜೋ ಅಬೆ ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಚರ್ಚಿಸಿದ್ದಾರೆ.

ಮಾತುಕತೆ ವೇಳೆ ದಕ್ಷಿಣ ಚೀನಾ ಸಮುದ್ರದ ವಿವಾದ ಬಗೆಹರಿಸಲು ವಿಶ್ವಸಂಸ್ಥೆಯ ನ್ಯಾಯಮಂಡಳಿ ಪ್ರಮುಖವಾದದ್ದು ಎಂಬ ಅಭಿಪ್ರಾಯವನ್ನು ಉಭಯ ನಾಯಕರೂ ವ್ಯಕ್ತಪಡಿಸಿದ್ದಾರೆ.

ಚೀನಾಗೆ ಆತಂಕ ಉಂಟುಮಾಡುವಂತಹ ಮತ್ತೊಂದು ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ, ಇರಾನ್ ನಲ್ಲಿ ಭಾರತದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಚಾಬಹಾರ್ ಬಂದರು ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.  

ಚೀನಾ-ಪಾಕಿಸ್ತಾನದ ಸಹಭಾಗಿತ್ವದಲ್ಲಿ ಬಲೂಚಿಸ್ತಾನದಲ್ಲಿ ನಿರ್ಮಿಸಲಾಗಿರುವ ಗ್ವದಾರ್ ಬಂದರಿಗೆ ಪರ್ಯಾಯವಾಗಿ ಭಾರತ- ಇರಾನ್ ಸಹಭಾಗಿತ್ವದಲ್ಲಿ ಇರಾನ್ ನಲ್ಲಿ ಚಾಬಹಾರ್ ಬಂದರು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಭಾರತಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಈ ಬಂದರು ನೆರವಾಗಲಿದೆ. ಆದರೆ ಈಗ ಭಾರತ ಜಪಾನ್ ನೊಂದಿಗೆ ಚಬಹಾರ್  ಬಂದರು ಅಭಿವೃದ್ಧಿ ಬಗ್ಗೆ ಚರ್ಚಿಸಿರುವುದು ಚೀನಾಗೆ ಆತಂಕ ಮೂಡಿಸಿದೆ.

click me!