
ಬೆಂಗಳೂರು(ಮೇ. 15) ಮಮತಾ ಬ್ಯಾನರ್ಜಿ ಅವರ ಪೋಟೋ ತಿರುಚಿದ ವಿವಾದಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ರಮ್ಯಾ ಅರುಣ್ ಜೇಟ್ಲಿ ಅವರ ಟ್ವೀಟ್ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಪೋಟೋವನ್ನು ನಟಿ ಪ್ರಿಯಾಂಕಾ ಚೋಪ್ರಾ ಫೋಟೋದೊಂದಿಗೆ ಸೇರಿಸಿ ಮಾರ್ಪ್ ಮಾಡಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಎನ್ನುವರನ್ನು ಬಂಧಿಸಲಾಗಿತ್ತು. ಪ್ರಿಯಾಂಕಾ ಶರ್ಮಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ನಂತರ ಆದೇಶ ಸಹ ನೀಡಿತ್ತು.
ಮೋದಿ ಕಾಲೆಳೆಯಲು ರಮ್ಯಾ ಬಳಸಿದ್ದ ಹಿಟ್ಲರ್ ಪೋಟೋದ ಅಸಲಿ ಕತೆ ಇಲ್ಲಿದೆ!
ಹಾಸ್ಯ, ವಿಡಂಬನೆ ಎಲ್ಲವನ್ನುಮುಕ್ತ ಸಮಾಜದಲ್ಲಿ ಸಮನಾಗಿ ಸ್ವೀಕಾರ ಮಾಡಬೇಕಾಗುತ್ತದೆ. ಕೆಲ ಸರ್ವಾಧಿಕಾರಿಗಳಿಗೆ ತಮ್ಮನ್ನು ನೋಡಿ ಬೆರೆಯವರು ನಗುವುದು ಇಷ್ಟ ಆಗುವುದಿಲ್ಲ. ಪಶ್ಚಿಮ ಬಂಗಾಳ ಸದ್ಯ ಆ ಸ್ಥಿತಿಯಲ್ಲಿದೆ ಎಂದು ಜೇಟ್ಲಿ ಬರೆದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ರಮ್ಯಾ 'ಜೇಟ್ಲಿಯವರೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ, ಹಿಂದೆ ಮೋದಿಯವರ ಕುರಿಯಾಗಿ ಮೆಮೆ ಹರಿಬಿಟ್ಟಿದ್ದಕ್ಕೆ ನನ್ನ ಮೇಲೆ ಪ್ರಕರಣ ದಾಖಲಾಗಿತ್ತು.. ಅಂದರೆ ನಿಮ್ಮ ಪ್ರಕಾರ ಮೋದಿ ಸರ್ವಾಧಿಕಾರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.