ವಿಧಾನಸಭೆಗೆ ಕಾಡುತ್ತಿದೆ ಶಾಸಕರ 'ಬರ'! ಇನ್ನಾದರೂ ಎಚ್ಚೆತ್ತುಕೊಳ್ಳುವರೇ?

Published : Jun 09, 2017, 07:48 PM ISTUpdated : Apr 11, 2018, 12:53 PM IST
ವಿಧಾನಸಭೆಗೆ ಕಾಡುತ್ತಿದೆ ಶಾಸಕರ 'ಬರ'! ಇನ್ನಾದರೂ ಎಚ್ಚೆತ್ತುಕೊಳ್ಳುವರೇ?

ಸಾರಾಂಶ

ಶಾಸಕರ ಬರ ವಿಧಾನಸಭೆಯನ್ನ ಕಾಡುತ್ತಿದೆ. ಇದು ಒಂದೆರಡು ದಿನದ ಪ್ರಶ್ನೆಯಲ್ಲ. ಕಳೆದ ಐದೂ ದಿನದ ಕಲಾಪದಲ್ಲಿ ವಿಧಾನಸಭೆಯಲ್ಲಿ ಶಾಸಕರ ಬರ ಸದ್ದು ಮಾಡಿದೆ.

ಬೆಂಗಳೂರು (ಜೂ.09): ಶಾಸಕರ ಬರ ವಿಧಾನಸಭೆಯನ್ನ ಕಾಡುತ್ತಿದೆ. ಇದು ಒಂದೆರಡು ದಿನದ ಪ್ರಶ್ನೆಯಲ್ಲ. ಕಳೆದ ಐದೂ ದಿನದ ಕಲಾಪದಲ್ಲಿ ವಿಧಾನಸಭೆಯಲ್ಲಿ ಶಾಸಕರ ಬರ ಸದ್ದು ಮಾಡಿದೆ.

ವಿಧಾನಮಂಡಲದ ಮಳೆಗಾಲದ ಅಧಿವೇಶನದ ಐದನೇ ದಿನವೂ ಕೂಡ ಸಚಿವರು ಹಾಗೂ ಶಾಸಕರ ಗೈರುಹಾಜರಿ ಚರ್ಚೆಗೆ ಗ್ರಾಸವಾಯ್ತು. ಕಳೆದ ನಾಲ್ಕು ದಿನಗಳಲ್ಲೂ ಕೂಡ ಪ್ರತಿ ನಿತ್ಯ ಬರಗಾಲದ ಚರ್ಚೆಯ ನಡುವೆ ಶಾಸಕರ ಬರ ಸದನದಲ್ಲಿ ಸದ್ದು ಮಾಡಿತ್ತು.

ವಿಧಾನಸಭಾ ಅಧಿವೇಶನದ ಮೊದಲ ಮೂರು ದಿನ ಬರಗಾಲದ ಕುರಿತ ಚರ್ಚೆ ನಡೆಯುವಾಗ ಶಾಸಕರ ಬರ ಸದನವನ್ನ ಬಹುವಾಗಿ ಕಾಡಿತ್ತು. ಈ ವೇಳೆ ವಿಪಕ್ಷ ಸದಸ್ಯರು ಸಚಿವರ ಗೈರುಹಾಜರಿಯ ವಿಚಾರವಾಗಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ರು. ಸ್ಪೀಕರ್​ ಸರ್ಕಾರಕ್ಕೆ ಸೂಚನೆ ನೀಡಿ ಗೈರುಹಾಜರಾಗಿರುವ ಸಚಿವರ ಪಟ್ಟಿ ಓದುವ ಮೂಲಕ ಖಡಕ್ ಸಂದೇಶ ರವಾನಿಸಿದರು.  

ವಿಧಾನಸಭೆಯಲ್ಲಿ ನಿನ್ನೆ 224 ಶಾಸಕರಲ್ಲಿ ಒಟ್ಟು ಹಾಜರಿದ್ದವರು ಕೇವಲ 62 ಶಾಸಕರು ಮಾತ್ರ. ಈ ಪೈಕಿ ಕಾಂಗ್ರೆಸ್​ನ 30, ಬಿಜೆಪಿಯ 18, ಜೆಡಿಎಸ್ ನ 12 ಹಾಗೂ ಇಬ್ಬರು ಪಕ್ಷೇತರ ಶಾಸಕರು ಮಾತ್ರ ಹಾಜರಿದ್ದರು. ಇನ್ನು ಇವತ್ತು ಕಾಂಗ್ರೆಸ್​ನ 33, ಬಿಜೆಪಿಯ 16, ಜೆಡಿಎಸ್ ನ 07 ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿ ಒಟ್ಟು 224 ಶಾಸಕರ ಪೈಕಿ ಕೇವಲ 58 ಶಾಸಕರು ಮಾತ್ರ ಹಾಜರಿದ್ದರು

ಶಾಸಕರು ಗೈರು ಹಾಜರಿಯಷ್ಟೇ ಅಲ್ಲದೇ, ಸಚಿವರ ಗೈರುಹಾಜರಿ ಕೂಡ ವಿಧಾನಸಭೆಯಲ್ಲಿ ಸದ್ದು ಮಾಡ್ತು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​, ಸಚಿವರ ಗೈರುಹಾಜರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು.

ಒಟ್ಟಾರೆ, ಬರಗಾಲದ ಚರ್ಚೆ ಮಾಡುವ ಮೂಲಕ ಬರಗಾಲದಿಂದ ತತ್ತರಿಸಿರುವ ರೈತರಿಗೆ ನೆರವು ಒದಗಿಸಿಕೊಡಬೇಕಾದ ಶಾಸಕರ ಬರವೇ ಸದನದಲ್ಲಿ ಪಕ್ಷಾತೀತವಾಗಿ ಸದ್ದು  ಮಾಡ್ತಿದೆ. ಇನ್ನುಳಿದ ನಾಲ್ಕು ದಿನಗಳ ಅಧಿವೇಶನದಲ್ಲಾದ್ರೂ ಶಾಸಕರು ಕಲಾಪದಲ್ಲಿ ಭಾಗಿಯಾಗುವ ಮೂಲಕ ಶಾಸಕರ ಬರವನ್ನೂ ನೀಗಿಸಿ, ಬರದಿಂದ ತತ್ತರಿಸಿರುವ ರೈತರಿಗೆ ನ್ಯಾಯ ಕೊಡಿಸಲು ಬರುವರೇ ಅನ್ನೋದು ಜನರ ಪ್ರಶ್ನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿವಾದಿತ Bengaluru Tunnel Road ಟೆಂಡರ್ ಅದಾನಿ ಗ್ರೂಪ್ ಪಾಲು? ಕಾಂಗ್ರೆಸ್ ಸರ್ಕಾರಕ್ಕೆ ಧರ್ಮಸಂಕಟ!
ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?