ಕಳಂಕಿತ ಕ್ರೀಡಾ ಆಡಳಿತಗಾರರಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲ ಅವರುಗಳಿಗೆ ನೀಡಿದ್ದ ಆಜೀವ ಅಧ್ಯಕ್ಷ ಸ್ಥಾನದ ಗೌರವವನ್ನು ದೇಶದ ನಾಲ್ದೆಸೆಗಳಿಂದಲೂ ವ್ಯಕ್ತವಾದ ಟೀಕೆಗಳಿಂದಾಗಿ ಕಡೆಗೂ ರದ್ದುಗೊಳಿಸಿದ ‘ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮೇಲಿನ ತಾತ್ಕಾಲಿಕ ಅಮಾನತನ್ನು ಕೇಂದ್ರ ಕ್ರೀಡಾ ಸಚಿವಾಲಯ ಹಿಂತೆಗೆದುಕೊಂಡಿದೆ.
ನವದೆಹಲಿ (ಜ.10): ಕಳಂಕಿತ ಕ್ರೀಡಾ ಆಡಳಿತಗಾರರಾದ ಸುರೇಶ್ ಕಲ್ಮಾಡಿ ಹಾಗೂ ಅ‘ಯ್ ಸಿಂಗ್ ಚೌಟಾಲ ಅವರುಗಳಿಗೆ ನೀಡಿದ್ದ ಆಜೀವ ಅಧ್ಯಕ್ಷ ಸ್ಥಾನದ ಗೌರವವನ್ನು ದೇಶದ ನಾಲ್ದೆಸೆಗಳಿಂದಲೂ ವ್ಯಕ್ತವಾದ ಟೀಕೆಗಳಿಂದಾಗಿ ಕಡೆಗೂ ರದ್ದುಗೊಳಿಸಿದ ‘ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮೇಲಿನ ತಾತ್ಕಾಲಿಕ ಅಮಾನತನ್ನು ಕೇಂದ್ರ ಕ್ರೀಡಾ ಸಚಿವಾಲಯ ಹಿಂತೆಗೆದುಕೊಂಡಿದೆ.
ಕಳೆದ ಡಿಸೆಂಬರ್ ೨೭ರಂದು ಚೆನ್ನೆ‘ನಲ್ಲಿ ನಡೆದಿದ್ದ ಐಒಎ ವಾರ್ಷಿಕ ಮಹಾಸಭೆಯಲ್ಲಿ ಕಲ್ಮಾಡಿ ಮತ್ತು ಚೌಟಾಲ ಅವರುಗಳಿಗೆ ಆಜೀವ ಅಧ್ಯಕ್ಷಗಿರಿಯನ್ನು ನೀಡಲಾಗಿತ್ತು. ಆದರೆ, ಇದು ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಐಒಎ ನಡೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯ ಮೂರು ದಿನಗಳಲ್ಲೇ ತಾತ್ಕಾಲಿಕವಾಗಿ ಅದನ್ನು ಅಮಾನತು ಮಾಡಿತ್ತು.
2010ರ ಕಾಮನ್ವೆಲ್ತ್ ಹಗರಣದಲ್ಲಿ ಕಲ್ಮಾಡಿ ಒಂಬತ್ತು ತಿಂಗಳು ಸೆರೆವಾಸ ಅನು‘ವಿಸಿ ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇನ್ನು ಐಒಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಚೌಟಾಲ ಕೂಡ ‘ಭ್ರಷ್ಟಾಚಾರ ಆರೋಪ ಎದುರಿಸಿದ್ದರು. ಅಂದಹಾಗೆ ಕೇವಲ ಕ್ರೀಡಾ ಸಚಿವಾಲಯದಿಂದ ಮಾತ್ರವಲ್ಲ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದಲೂ ಅಮಾನತುಗೊಳ್ಳಬೇಕಾಗುತ್ತದೆ ಎಂಬ ದಿಗಿಲಿನಲ್ಲಿ ಐಒಎ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.