
ಚೆನ್ನೈ(ಆ.21): ಹಲವು ತಿಂಗಳಿಂದ ಆರೋಪ ಪ್ರತ್ಯಾರೋಪಗಳ ನಂತರ 2 ಬಣಗಳಾಗಿದ್ದ ತಮಿಳುನಾಡಿನ ಆಡಳಿತರೂಢ ಪಕ್ಷ ಅಣ್ಣಾ ಡಿಎಂಕೆ ಕೊನೆಗೂ ಒಂದಾಗಿದೆ. ಉಪಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್'ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರ ಶಶಿಕಲಾ ಹಾಗೂ ಒ. ಪನ್ನೀರ್'ಸೆಲ್ವಂ 2 ಬಣಗಳಾಗಿ ಬೇರ್ಪಟ್ಟಿದ್ದವು. ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಒಳಗಾದ ನಂತರ ತಮ್ಮ ಬಣದಿಂದ ಇ.ಪಳಿನಿಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ ಪನ್ನೀರ್ ಸೆಲ್ವಂ ಅವರನ್ನು ಒಳಗೊಂಡು ಹಲವರನ್ನು ಉಚ್ಚಾಟಿಸಿದ್ದರು.
ರಾಜ್ಯಪಾಲರಾದ ಸಿ.ಹೆಚ್. ವಿದ್ಯಾಸಾಗರ್ ಅವರು ಪನ್ನೀರ್'ಸೆಲ್ವಂ ಅವರನ್ನು ಒಳಗೊಂಡು ಅವರ ಬಣದ ಮೂವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ. 'ಹಿಂದಿನ ಎಲ್ಲ ಭಿನ್ನಾಭಿಪ್ರಾಯವನ್ನು ಮರೆತು ತಾವು ಅಮ್ಮನ ಮಕ್ಕಳಾಗಿ ಸೋದರರಾಗಿ ಇರುತ್ತೇವೆ' ಎಂದು ಪನ್ನೀ'ರ್ ಸೆಲ್ವಂ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.