#MeToo : ಶ್ರುತಿ ಬೆಂಬಲಕ್ಕೆ ನಿಂತರು ಶ್ರದ್ಧಾ ಶ್ರೀನಾಥ್

Published : Oct 21, 2018, 10:27 AM ISTUpdated : Oct 21, 2018, 03:00 PM IST
#MeToo :  ಶ್ರುತಿ ಬೆಂಬಲಕ್ಕೆ ನಿಂತರು ಶ್ರದ್ಧಾ ಶ್ರೀನಾಥ್

ಸಾರಾಂಶ

ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಮೇಲೆ ಖ್ಯಾತ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಇನ್ನೋರ್ವ ನಟಿ ಶ್ರದ್ಧಾ ಬೆಂಬಲಿಸಿದ್ದಾರೆ. 

ಬೆಂಗಳೂರು :  ಕನ್ನಡ ಚಿತ್ರರಂಗದಲ್ಲೂ ಚುರುಕುಗೊಂಡ ಮೀ ಟೂ ಅಭಿಯಾನ ಈಗ ನಟ ಅರ್ಜುನ್ ಸರ್ಜಾ ಅವರ ಕೊರಳಿಗೆ ಸುತ್ತಿಕೊಂಡಿದೆ.ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಮೇಲೆ ಖ್ಯಾತ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಇನ್ನೋರ್ವ ನಟಿ ಶ್ರದ್ಧಾ ಬೆಂಬಲಿಸಿದ್ದಾರೆ. 

"

ಶ್ರುತಿ ಹರಿಹರನ್ ಆರೋಪಕ್ಕೆ ಇನ್ನೊಬ್ಬ ನಾಯಕ ನಟಿ ಶ್ರದ್ಧಾ ಶ್ರೀನಾಥ್ ಬೆಂಬಲ ಸೂಚಿಸಿದ್ದಾರೆ. ‘ನನಗೆ 2016 ರಿಂದಲೇ ಈ ಘಟನೆ ಬಗ್ಗೆ ಗೊತ್ತಿತ್ತು. 

ನಾವಿಬ್ಬರೂ ಕಾಸ್ಟಿಂಗ್ ಕೌಚ್ ಬಗ್ಗೆ ಒಂದು ಟಾಕ್‌ಶೋದಲ್ಲಿ ಪಾಲ್ಗೊಂಡಾಗ ಶ್ರುತಿ ಈ ಬಗ್ಗೆ ಹೇಳಿದ್ದರು. ಆದರೆ, ಯಾರ ಹೆಸರನ್ನೂ ಹೇಳಿರಲಿಲ್ಲ. ಶ್ರುತಿ ಜೊತೆ ನಡೆದ ಘಟನೆ ಬಗ್ಗೆ ನನಗೆ ವಿಷಾದವಿದೆ. ಯಾರಿಗೂ ಅವರ ಕೆಲಸದ ಸ್ಥಳದಲ್ಲಿ ಇಂತಹ ಶೋಷಣೆ ಆಗಬಾರದು’ ಎಂದು ಶ್ರದ್ಧಾ ಟ್ವೀಟ್ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಸುತ್ತೋಲೆ ವಿವಾದಕ್ಕೆ ತೆರೆ.. ಹಾಲಿ ಪಿಯುಸಿ ಉಪನ್ಯಾಸಕರಿಗೆ ಇಲ್ಲ ಹಿಂಬಡ್ತಿ: ಸಚಿವ ಮಧು ಬಂಗಾರಪ್ಪ