ಅಮಿತಾಭ್‌ಗೂ ಮೀ ಟೂ ಕಳಂಕ ಮೆತ್ತಿದ ಸಪ್ನಾ

Published : Oct 13, 2018, 08:07 AM ISTUpdated : Oct 13, 2018, 11:20 AM IST
ಅಮಿತಾಭ್‌ಗೂ ಮೀ ಟೂ ಕಳಂಕ ಮೆತ್ತಿದ ಸಪ್ನಾ

ಸಾರಾಂಶ

#MeToo ಅಭಿಯಾನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಬ್ಬರಾದ ನಂತರ ಮತ್ತೊಬ್ಬರ ಸ್ಟಾರ್ ನಟರು ಸೇರಿದಂತೆ ಗಣ್ಯರು ಹೆಸರು ಇದರೊಂದಿಗೆ ಥಳಕು ಹಾಕಿ ಕೊಳ್ಳುತ್ತಿದೆ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಹೆಸರೂ ಸೇರಿಕೊಂಡಿದ್ದು, ಯಾರು, ಏನು ಆರೋಪ ಮಾಡಿದ್ದಾರೆ?

ಮುಂಬೈ: ಮೀ ಟೂ ಆಂದೋಲನ ಚಿತ್ರರಂಗದ ಗಣ್ಯಾತಿಗಣ್ಯರ ಬಣ್ಣ ಬಯಲು ಮಾಡಿರುವ ಬೆನ್ನಲ್ಲೇ, ಸ್ಫೋಟಕ ಆರೋಪವೊಂದು ಕೇಳಿಬಂದಿದೆ. ಬಾಲಿವುಡ್‌ನ ಮೇರುತಾರೆ ಅಮಿತಾಭ್‌ ಬಚ್ಚನ್‌ ಕೂಡಾ ಇಂಥದ್ದೇ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ ಎಂದು ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿ ಗಂಭೀರ ಆರೋಪ ಮಾಡಿದ್ದಾರೆ. ಇದು ಬಾಲಿವುಡ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮೀ ಟೂ ಆಂದೋಲನ ಬೆಂಬಲಿಸಿ ಬಚ್ಚನ್‌ ಮಾಡಿದ್ದ ಟ್ವೀಟ್‌ ಒಂದನ್ನು ಮಹಿಳೆಯೊಬ್ಬರು ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಪ್ನಾ ‘ಇದೊಂದು ದೊಡ್ಡ ಸುಳ್ಳು. ಪಿಂಕ್‌ ಚಿತ್ರ ಬಿಡುಗಡೆಯಾಯ್ತು, ಹೋಯಿತು. ಇನ್ನು ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಬಣ್ಣ ಶೀಘ್ರ ಹೊರಬರಲಿದೆ. ನಿಮ್ಮ ಸತ್ಯ ಶೀಘ್ರ ಹೊರಬೀಳಲಿದೆ. ಬಹುಷ ಇದನ್ನು ಕೇಳಿ ನೀವು ಬೆರಳು ಕಚ್ಚಿಕೊಳ್ಳುತ್ತಿರಬಹುದು, ಏಕೆಂದರೆ ಕಚ್ಚಲು ಬರೀ ಉಗುರು ಸಾಕಾಗದು.’ ಎಂದು ಹೇಳಿದ್ದಾರೆ.

ಜೊತೆಗೆ ಬಚ್ಚನ್‌ನ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಸ್ವತಃ ನಾನೇ ಹಲವು ಕಥೆಗಳನ್ನು ಕೇಳಿದ್ದೇನೆ. ಬಹುಷಃ ಹೀಗೆ ನೊಂದವರ ಪೈಕಿ ಯಾರಾದರೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದರೆ ಎಲ್ಲವೂ ಬಯಲಾಗಲಿದೆ ಎಂದು ಸಪ್ನಾ ಹೇಳಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!