ರಫೆಲ್ ಡೀಲ್: ರಾಹುಲ್ ಗಾಂಧಿ ಬೆಂಗಳೂರು ಪ್ರತಿಭಟನಾ ರ‍್ಯಾಲಿ ಮುಂದೂಡಿಕೆ

By Web DeskFirst Published Oct 12, 2018, 11:15 AM IST
Highlights

ರಫೆಲ್ ಡೀಲ್ ವಿರುದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶ ಮುಂದೂಡಲಾಗಿದೆ. ಆದರೆ ನಿಗಧಿಯಂತೆ ರಾಹುಲ್ ಸಂವಾದ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು(ಅ.12):  ರಫೇಲ್‌ ಯುದ್ಧ ​ವಿ​ಮಾನ ಖರೀದಿಯಲ್ಲಿ ಭ್ರಷ್ಟಾ​ಚಾರ ನಡೆದಿದೆ ಎಂದು ಆರೋಪಿಸಿ ಎಐ​ಸಿ​ಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃ​ತ್ವ​ದಲ್ಲಿ ಅ.13ರಂದು ಬೆಂಗ​ಳೂ​ರಿ​ನಲ್ಲಿ ನಡೆ​ಸಲು ಉದ್ದೇ​ಶಿ​ಸಿದ್ದ ಪ್ರತಿ​ಭ​ಟನಾ ಸಮಾ​ವೇಶ ಮುಂದೂ​ಡ​ಲಾ​ಗಿದೆ. 

ಆದ​ರೆ, ದೇಶಕ್ಕೆ ಎಚ್‌​ಎ​ಎಲ್‌ ಕೊಡುಗೆ ಬಗ್ಗೆ ಸಂಸ್ಥೆಯ ನಿವೃತ್ತ ನೌಕ​ರರು, ಅಧಿ​ಕಾ​ರಿ​ಗಳು ಹಾಗೂ ಗಣ್ಯರೊಂದಿಗೆ ರಾಹುಲ್‌ ಗಾಂಧಿ ನಡೆ​ಸ​ಲಿ​ರುವ ಸಂವಾದ ನಿಗ​ದಿ​ಯಂತೆ ನಡೆ​ಯುತ್ತಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ತಿಳಿ​ಸಿ​ದ​ರು.

ಗುರು​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕೆಪಿ​ಸಿ​ಸಿಯು ಒಂದು​ ಲಕ್ಷ ಜನ​ರನ್ನು ಸೇರಿಸಿ ರಾಹುಲ್‌ ನೇತೃ​ತ್ವ​ದಲ್ಲಿ ಬೃಹತ್‌ ಸಮಾ​ವೇ​ಶ​ವನ್ನು ಆಯೋ​ಜಿ​ಸಲು ಉದ್ದೇ​ಶಿ​ಸಿತ್ತು. ಆದರೆ, ರಾಹುಲ್‌ ಗಾಂಧಿ ಅವರು ಬೇರೆ ಕಾರ್ಯ​ಕ್ರ​ಮ​ಗ​ಳಲ್ಲಿ ಪಾಲ್ಗೊ​ಳ್ಳು​ತ್ತಿ​ರು​ವು​ದ​ರಿಂದ ಈ ಸಮಾ​ವೇ​ಶ​ವನ್ನು ಮುಂದೂ​ಡ​ಲಾ​ಗಿದೆ. ಶೀಘ್ರ​ದಲ್ಲೇ ಮತ್ತೊಂದು ದಿನ ನಿಗದಿ ಪಡಿಸಿ ಸಮಾ​ವೇಶ ನಡೆ​ಸ​ಲಾ​ಗು​ವುದು ಎಂದ​ರು.

ಇನ್ನು ಎಚ್‌​ಎ​ಎಲ್‌ ಕೊಡುಗೆ ಬಗ್ಗೆ ರಾಹುಲ್‌ ಗಾಂಧಿ ಅವರು ಸಂಸ್ಥೆಯ ನಿವೃತ್ತ ನೌಕ​ರರು, ಅಧಿ​ಕಾ​ರಿ​ಗಳು ಹಾಗೂ ಗಣ್ಯ​ರೊಂದಿಗಿನ ಸಂವಾದ ನಿಗ​ದಿ​ಯಂತೆ ಅ.13ರಂದೇ ನಡೆ​ಯ​ಲಿದೆ. ಸಂವಾದ ರದ್ದಾ​ಗಿಲ್ಲ. ಈ ಸಂವಾ​ದ​ವನ್ನು ಕಾಂಗ್ರೆಸ್‌ ಆಯೋ​ಜಿ​ಸಿಲ್ಲ. ಬದ​ಲಾಗಿ, ಖಾಸಗಿ ಸಂಘ​ಟ​ನೆ​ಗಳು ಆಯೋ​ಜಿ​ಸಿವೆ ಎಂದ​ರು.

ಅನುಮತಿ ಕೇಳಿಯೇ ಇಲ್ಲ:

ಆದರೆ, ರಾಹುಲ್‌ ಸಂವಾ​ದಕ್ಕೆ ಎಚ್‌​ಎ​ಎಲ್‌ ಅವ​ಕಾಶ ನಿರಾ​ಕ​ರಿ​ಸಿದೆಯಲ್ಲ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ಸಂವಾ​ದ​ವನ್ನು ಕೆಪಿ​ಸಿಸಿ ಆಯೋ​ಜಿ​ಸಿಲ್ಲ. ಖಾಸಗಿ ಸಂಘ​ಟ​ನೆ​ಗಳು ಆಯೋ​ಜಿ​ಸಿ​ರು​ವುದು. ಇನ್ನು ಅನು​ಮತಿ ಕೇಳಿ​ದ್ದರೆ ಅವ​ಕಾಶ ನಿರಾ​ಕ​ರಿ​ಸುವ ಪ್ರಶ್ನೆ ಬರು​ತ್ತದೆ. ಕೆಪಿ​ಸಿಸಿ ಇಂತಹ ಯಾವುದೇ ಅನು​ಮತಿ ನೀಡು​ವಂತೆ ಎಚ್‌​ಎ​ಎಲ್‌ ಅನ್ನು ಕೋರಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

ಎಚ್‌​ಎ​ಎ​ಲ್‌​ನಂತಹ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿ​ರುವ ಸಂಸ್ಥೆಗೆ ಸಾಮ​ರ್ಥ್ಯ​ವಿಲ್ಲ ಎಂಬಂತಹ ಹೇಳಿ​ಕೆ​ಯನ್ನು ರಕ್ಷಣಾ ಸಚಿ​ವರೇ ನೀಡು​ತ್ತಾರೆ. ಅಂದರೆ, ಯಾರು ಈ ಸಂಸ್ಥೆ​ಯನ್ನು ಕಾಪಾ​ಡ​ಬೇಕೋ ಅವರೇ ಈ ಸಂಸ್ಥೆಯ ವಿರುದ್ಧ ನಿಂತು ನಟ್ಟು ಬೋಲ್ಟುತಯಾ​ರಿ​ಸಲು ಬರದ ರಿಲ​ಯನ್ಸ್‌ ಸಂಸ್ಥೆ ಪರ​ವಾಗಿ ನಿಲು​ತ್ತಾರೆ. ಇಂತಹ ಪರಿ​ಸ್ಥಿ​ತಿ​ಯಲ್ಲಿ ಎಚ್‌​ಎ​ಎಲ್‌ ಪರ​ವಾಗಿ ಪ್ರತಿ​ಭ​ಟನೆ ನಡೆ​ಸುವ ಹಾಗೂ ಸಂಸ್ಥೆಯ ಜತೆ ನಿಲ್ಲುವ ಅವ​ಶ್ಯ​ಕತೆ ಇದೆ ಎಂದು ಅವರು ಪ್ರತಿ​ಪಾ​ದಿ​ಸಿ​ದ​ರು.

click me!