ಲೋಕಸಭೆಗೆ ಆರಂಭದಲ್ಲೇ ವಿಘ್ನ : ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ ಎಂದ ಬಿಎಸ್ಪಿ

First Published Jun 18, 2018, 1:14 PM IST
Highlights
  • ಮೈತ್ರಿ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದ ರಾಜ್ಯ ಬಿಎಸ್ಪಿ ಅಧ್ಯಕ್ಷ
  • ಎಲ್ಲ 230 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಣೆ

ಭೋಪಾಲ್[ಜೂ.18]: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದುಗೂಡುವ ವಿರೋಧ ಪಕ್ಷಗಳ ಕನಸಿಗೆ ಆರಂಭದಲ್ಲೇ ವಿಘ್ನವುಂಟಾಗಿದೆ.

ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ಪಿ ಸ್ಪಷ್ಟಪಡಿಸಿದೆ.

ನಮ್ಮ ಪಕ್ಷವು ಎಲ್ಲ 230 ಸ್ಥಾನಗಳಿಗೂ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಜೊತೆಗಿನ ಮೈತ್ರಿಯ ಬಗ್ಗೆ ರಾಜ್ಯ ಹಾಗೂ ಕೇಂದ್ರ ಹಂತದಲ್ಲಿ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನರ್ಮದಾ ಪ್ರಸಾದ್ ಅಹಿರ್ವಾರ್ ತಿಳಿಸಿದ್ದಾರೆ.

ಮೈತ್ರಿಯ ಬಗ್ಗೆ ನನಗೆ ಪಕ್ಷದ ಅಧ್ಯಕ್ಷರಿಂದ ಯಾವುದೇ ನಿರ್ದೇಶನ ಬಂದಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರೊಂದಿನ ಮಾತುಕತೆಯ ಪ್ರಸ್ತಾವನೆಯ ಬಗ್ಗೆ ಕೂಡ ನರ್ಮದಾ ಅವರು ನಿರಾಕರಿಸಿದರು. ಮಧ್ಯಪ್ರದೇಶ ವಿದಾನಸಭೆ ಚುನಾವಣೆ  ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್'ನಲ್ಲಿ ನಡೆಯುವ ಸಾಧ್ಯತೆಯಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 165, ಕಾಂಗ್ರೆಸ್ 58 ಹಾಗೂ ಬಿಎಸ್ಪಿ 4 ಹಾಗೂ ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. 

ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 36 ಹಾಗೂ ಬಿಎಸ್ಪಿ 6 ರಷ್ಟು ಮತಗಳಿಸಿದ್ದರು. 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು  ಸೋಲಿಸುವ ಸಲುವಾಗಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಾಗಿ ನಿರ್ಧರಿಸಿವೆ.

 

click me!