ವಿಜಯಾ ಬ್ಯಾಂಕ್‌ ಉಳಿಸಲು ಜೇಟ್ಲಿಗೆ ಸಂಸದರ ಮನವಿ

By Web DeskFirst Published Jan 9, 2019, 12:21 PM IST
Highlights

ವಿಜಯಾ ಬ್ಯಾಂಕ್‌ ವಿಲೀನಗೊಳಿಸದೆ ಉಳಿಸಿ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ಜೇಟ್ಲಿಗೆ ಸಂಸದರ ಮನವಿ ಸಲ್ಲಿಸಿದ್ದಾರೆ.

ನವದೆಹಲಿ[ಜ.09]: ವಿಜಯಾ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡಾ ಮತ್ತು ದೇನಾ ಬ್ಯಾಂಕುಗಳೊಂದಿಗೆ ವಿಲೀನ ಮಾಡಿರುವುದನ್ನು ಮರುಪರಿಶೀಲಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮುಂಬೈಯ ಸಂಸದ ಗೋಪಾಲ ಶೆಟ್ಟಿ ಅವರನ್ನೊಳಗೊಂಡ ನಿಯೋಗವು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿತು.

Vijaya Bank was originated in Dakshina Kannada.
It is one of the pride Bank of coastal Karnataka.
Our elders started it to help rural people specially farmers

Requested Hon FM Sri to retain the Bank with its identity. pic.twitter.com/ZDu87LT5OA

— Nalinkumar Kateel (@nalinkateel)

ವಿಜಯಾ ಬ್ಯಾಂಕ್‌ ಅನ್ನು ಸ್ವತಂತ್ರವಾಗಿಯೇ ಉಳಿಸಿಕೊಳ್ಳಬೇಕು ಅಥವಾ ವಿಲೀನಗೊಂಡು ರೂಪುಗೊಳ್ಳುವ ಬ್ಯಾಂಕ್‌ಗೆ ವಿಜಯಾ ಬ್ಯಾಂಕ್‌ ಎಂದು ನಾಮಕರಣ ಮಾಡಿ ವಿಜಯಾ ಬ್ಯಾಂಕಿನ ಹೆಸರನ್ನು ಉಳಿಸಿಕೊಡುವಂತೆ ಸಂಸದರು ಸಚಿವರಲ್ಲಿ ಕೋರಿದ್ದಾರೆ. ತಮ್ಮ ಮನವಿಗೆ ಹಣಕಾಸು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!