ಮಂಡ್ಯ[ಜೂ. 10] ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿಯುತ್ತಿದ್ದರೆ ಮಂಡ್ಯ ಬಿಜೆಪಿ ಘಟಕದ ಅಧ್ಯಕ್ಷ ಮಾಡಿರುವ ಪೋಸ್ಟ್ ಒಂದು ವಿವಾದ ಎಬ್ಬಿಸಿದೆ.
ಮಂಡ್ಯ ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ್ ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಸಹಜವಾಗಿಯೇ ಆಕ್ರೋಶಕ್ಕೆ ಕಾರಣವಾಗಿದೆ.
ಅಗಲಿದ ಕಾರ್ನಾಡ್ ಬಗ್ಗೆ ರವಿ ಬೆಳಗೆರೆ ಖಾಸ್ ಬಾತ್
ಒಂದು ಧರ್ಮವನ್ನು ಅವಹೇಳನ ಮಾಡುವ ಕೊಳಚೆಗಳಿಗೆ ಇಂದು ಸರ್ಕಾರಿ ರಜೆಯ ಅನಿವಾರ್ಯ ಇರುವುದೇ..? ಎಂದು ಪೋಸ್ಟ್ ಮಾಡಿದ ಬಿಜೆಪಿ ಮುಖಂಡ ಅರವಿಂದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರರು ಸಾವನ್ನು ಸಂಭ್ರಮಿಸುವ ಕೆಟ್ಟ ಮನಸ್ಥಿತಿ ನಿಮ್ಮದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಹಿತಿ ಯು.ಆರ್.ಅನಂತಮೂರ್ತಿ ಮತ್ತು ಕೇಂದ್ರದ ಸಚಿವರಾಗಿದ್ದ ಅನಂತ್ ಕುಮಾರ್ ಮತ್ತು ನಡೆದಾಡುವ ದೇವರು ಸಿದ್ಧಗಂಗಾ ಸ್ವಾಮೀಜಿ ನಿಧನದ ಸಂದರ್ಭದಲ್ಲಿಯೂ ಕೆಲ ಕಿಡಿಗೇಡಿಗಳು ವಿಕೃತಿ ಮೆರೆಯುವ ಕೆಲಸ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.