
ಶಿವಮೊಗ್ಗ: ಆಸ್ತಿ ಮೇಲಿನ ಆಸೆಗಾಗಿ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ವಿಷ ಕುಡಿಸಿ ಕೊಲೆ ಮಾಡಿರುವ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಮಂಡಘಟ್ಟದಲ್ಲಿ ನಡೆದಿದೆ. ಎಂಜಿನಿಯರಿಂಗ್ ಪದವೀಧರೆ ನಳಿನಾ ಮೃತಪಟ್ಟಮಹಿಳೆ. 7 ತಿಂಗಳ ಗರ್ಭಿಣಿಯಾಗಿದ್ದ ನಳಿನಾಗೆ ಪತಿ ಚೇತನ್, ಚೇತನ್ ತಾಯಿ ಲತಾ ಹಾಗೂ ಆತನ ಅಜ್ಜ ಹಾಲಪ್ಪ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೊನ್ನಾಳಿ ತಾಲೂಕು ಗೋವಿನಕೋವಿ ಗ್ರಾಮದ ರಾಜಪ್ಪ, ಕಮಲಮ್ಮ ದಂಪತಿಯ ಏಕೈಕ ಪುತ್ರಿಯಾಗಿರುವ ನಳಿನಾರನ್ನು ಪ್ರೀತಿಸುವ ನಾಟಕವಾಡಿದ ಚೇತನ್ ಕಳೆದ ವರ್ಷ ಮೈಸೂರಿಗೆ ಕರೆದುಕೊಂಡು ಹೋಗಿ ಮದುವೆಯಾಗಿದ್ದನು. ಕೆಲ ತಿಂಗಳ ನಂತರ ತವರು ಮನೆಯಿಂದ ಆಸ್ತಿ ಪಾಲು ಪಡೆಯುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ.
ಈತನ ಬಲವಂತಕ್ಕೆ ರಾಜಪ್ಪ, ಕಮಲಮ್ಮ ದಂಪತಿ ಜಂಟಿ ಖಾತೆ ಮಾಡಿ ಆಸ್ತಿಯನ್ನು ಕೊಟ್ಟಿದ್ದಾರೆ. ಆದರೆ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದ ಚೇತನ್ ಇದಕ್ಕೆ ಒಪ್ಪದಿದ್ದಾಗ ತನ್ನ ತಾಯಿ ಮತ್ತು ಅಜ್ಜನೊಂದಿಗೆ ಸೇರಿ ಗರ್ಭಿಣಿ ನಳಿನಾ ಅವರಿಗೆ ವಿಷ ಕುಡಿಸಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ನಳಿನಾ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಚೇತನ್, ಆತನ ತಾಯಿ ಹಾಗೂ ಅಜ್ಜನನ್ನ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.