
ಬೆಂಗಳೂರು(ಜ.18): ಸಾವಿರಾರು ಜನರಿಗೆ ಮೋಸ ಮಾಡಿರೋ ಮಹಾನ್ ವಂಚಕ ಸಚಿನ್ ನಾಯ್ಕ್'ನಿಂದಾಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ವಂಚಕನಿಗೆ ಹಣ ಕೊಟ್ಟು ಅಮ್ಮನನ್ನು ಉಳಿಸಿಕೊಳ್ಳಲು ಹೆಣಗಾಡಿದವರಿದ್ದಾರೆ. ಕಳೆದುಕೊಂಡ ಹಣದ ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿರುವವರು ಇದ್ದಾರೆ. ಸಚಿನ್ ನಾಯ್ಕ್ ಎಂಬ ವಂಚಕನ ಅಸಲಿಯತ್ತನ್ನ ಸುವರ್ಣ ನ್ಯೂಸ್ ಜನರ ಮುಂದಿಡುತ್ತಲೇ ಇದೆ. ಈ ವಂಚಕನಿಂದ ಅದೆಷ್ಟೂ ಮಂದಿ ನೋವು ಅನುಭವಿಸಿದ್ದಾರೆ ಗೊತ್ತಾ..?
ಹಾಸನ ಮೂಲದ ಸತೀಶ್ ಎಂಬುವರು ಟಿಜಿಎಸ್ ಕನ್ಸ್'ಟ್ರಕ್ಷನ್ಸ್'ನಲ್ಲಿ ಫ್ಲಾಟ್ ಬುಕ್ ಮಾಡಿದ್ದರು. ಬೆಂಗಳೂರಿನಲ್ಲೊಂದು ಮನೆ ಮಾಡಿಕೊಳ್ಳಬೇಕು ಅನ್ನೋ ಅವರ ಆಸೆ ಸಚಿನ್ ನಾಯ್ಕ್ಗೆ ಹಣ ಕೊಡುವಂತೆ ಮಾಡಿತ್ತು. ಹಾಗೆ ಸಚಿನ್ ನಾಯ್ಕ್'ಗೆ ಸತೀಶ್ ನಾಲ್ಕು ಕಂತುಗಳಲ್ಲಿ ಕೊಟ್ಟ ಹಣ ಐದು ಕಾಲು ಲಕ್ಷ. ಬೆಳಂದೂರಿನಲ್ಲಿ ನಿರ್ಮಾಣವಾಗುತ್ತಿದ್ದ ಟಿಜಿಎಸ್ ಸಿಂಗಪೂರ್ ಎನ್ನುವ ಪ್ರಾಜೆಕ್ಟ್'ಗಾಗಿ ಹಣ ಕೊಟ್ಟಿದ್ದರು. ಇದೇ ಸಮಯದಲ್ಲಿ ಸತೀಶ್ ತಾಯಿ ಕ್ಯಾನ್ಸರ್'ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ಚಿಕಿತ್ಸೆಗಾಗಿ ಲಕ್ಷಾಂತರ ಹಣ ಬೇಕಿತ್ತು. ಈ ವೇಳೆ ತಮ್ಮ ಫ್ಲಾಟ್ ಕ್ಯಾನ್ಸಲೇಷನ್ ಮಾಡಿಸಿ ಹಣ ವಾಪಸ್ ಕೊಡಿ ಅಮ್ಮನನ್ನು ಉಳಿಸಿಕೊಳ್ಳಬೇಕು ಎಂದರೂ ಸಚಿನ್ ನಾಯ್ಕ್ ಎನ್ನುವ ವಂಚಕನ ಮನಸ್ಸು ಕರಗಿರಲಿಲ್ಲ. ಆತ ಕೊಟ್ಟ ಚೆಕ್ ಬೌನ್ಸ್ ಆಗಿತ್ತು.
ಇದಷ್ಟೇ ಅಲ್ಲದೆ ಸಚಿನ್ ನಾಯ್ಕ್'ನ ನಿರ್ಧಯಿ ವಂಚನೆ ಇಷ್ಟಕ್ಕೇ ನಿಲ್ಲುವುದಿಲ್ಲ. ಸಾಲ ಮಾಡಿ ಹಣ ಕೊಟ್ಟಿದ್ದ ಬೆಂಗಳೂರಿನ ಪ್ರಭಾಕರ್ ಅನ್ನುವವರು ತಮ್ಮ ಹಣಕ್ಕಾಗಿ ಪರದಾಡಿದ್ದಾರೆ. ನ್ಯಾಯ ಕೇಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಟಿಜಿಎಸ್ ಬಾಗ್ಯಲಕ್ಷ್ಮೀ, ವೈಭವ ಲಕ್ಷ್ಮೀ ಎನ್ನುವ ಪ್ರಾಜೆಕ್ಟ್'ಗಳಿಗೆ 9 ಲಕ್ಷದಷ್ಟು ಹಣ ಸಾಲ ಮಾಡಿ ಸಚಿನ್ ನಾಯ್ಕ್'ಗೆ ಕೊಟ್ಟಿದ್ದರು. ತಾವು ಕೊಟ್ಟ ಹಣವೂ ಸಿಗದೇ, ಫ್ಲಾಟ್ ಕೂಡ ಸಿಗದೇ ಸಾಲಗಾರರ ಕಾಟಕ್ಕೆ ಬೇಸತ್ತು ಡೆತ್ನೋಟ್ ಬರೆದಿಟ್ಟು, ಟಿಜಿಎಸ್ ಕಂಪನಿಯ ಮೋಸದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಪ್ರಭಾಕರ್ ಬಂದಿದ್ದರು. ಆದರೆ ಈ ವಿಚಾರ ಮನೆಯಲ್ಲಿ ಗೊತ್ತಾಗಿದ್ದರಿಂದಾಗಿ ಅವರ ಪ್ರಾಣ ಉಳಿಯುವಂತಾಯಿತು.
ಇಷ್ಟೆಲ್ಲ ಆದರೂ ಸಚಿನ್ ನಾಯ್ಕ್ ಮೋಸಕ್ಕೊಳಗಾದ ಇಂತಹ ಸಾವಿರಾರು ಅಮಾಯಕರಿಗೆ ಹಣ ಕೊಟ್ಟಿಲ್ಲ. ಕಷ್ಟಪಟ್ಟು ಕೂಡಿಟ್ಟಿದ್ದ ಹಣ ತಿಂದವನಿಗೆ ಕಳೆದುಕೊಂಡವರು ಪ್ರತಿದಿನ ಹಿಡಿ ಶಾಪ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.